Advertisement

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

01:13 AM Apr 08, 2024 | Team Udayavani |

ರಾಮನಗರ: ರಾಜ್ಯದಲ್ಲಿ ಬಿಸಿಲ ಝಳಕ್ಕೆ ಜನರ ಜತೆಗೆ ಪ್ರಾಣಿಗಳೂ ಬಸವಳಿದಿವೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಎರಡು ಕಾಡಾನೆಗಳು ಬಿಸಿಲ ಝಳ, ನೀರಿಲ್ಲದೆ ಜೀವ ಕಳೆದುಕೊಂಡಿವೆ ಎಂಬ ಶಂಕೆ ವ್ಯಕ್ತವಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿ ಹಳ್ಳಿ ಹೋಬಳಿ ಗರಳಾಪುರ ಗ್ರಾಮದ ಸಮೀಪ 14 ವರ್ಷದ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಇದೇ ಹೋಬಳಿಯ ಯಳವನಾಥ ಗ್ರಾಮದ ಅರಣ್ಯದಲ್ಲಿ 34 ವರ್ಷದ ಮತ್ತೊಂದು ಆನೆ ಸಾವಿಗೀಡಾಗಿದೆ.

Advertisement

ನಿತ್ರಾಣಗೊಂಡಿದ್ದ ಆನೆ
ಮೂರು ದಿನಗಳ ಹಿಂದೆ 14 ವರ್ಷದ ಗಂಡಾನೆ ಬಿಸಿಲ ಬೇಗೆಯಿಂದಾಗಿ ಪೂರ್ಣ ನಿತ್ರಾಣಗೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯನ್ನು ಉಪಚರಿಸಿ ಮತ್ತೆ ಅರಣ್ಯಕ್ಕೆ ಬಿಟ್ಟಿದ್ದರು. ಈಗ ಅದೇ ಆನೆ ಸಾವಿಗೀಡಾಗಿದೆ.

ಮತ್ತೊಂದು ಆನೆ ಕನಕಪುರ ತಾಲೂಕಿನ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಸೇರಿದ್ದ ಸ್ಥಳದಲ್ಲಿ ಸಾವಿಗೀಡಾಗಿದ್ದು, ಬಿಸಿಲಿನ ತಾಪಮಾನ ಹೆಚ್ಚಾಗಿರುವುದೇ ಆನೆಗಳ ಸಾವಿಗೆ ಕಾರಣ ಎನ್ನಲಾಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮನಗರ ಡಿಎಫ್ಒ ರಾಮಕೃಷ್ಣಪ್ಪ, “ಗರಳಾಪುರ ಗ್ರಾಮದ ಬಳಿ ಆನೆ ಸಾವಿಗೀಡಾಗಲು ಹೊಟ್ಟೆ ಉಬ್ಬರ ಕಾರಣ. ಬೇರೇನೂ ಮೇವು ಸಿಗದೆ ಮಾವಿನ ಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದು ಆಮ್ಲಿàಯತೆ ಹೆಚ್ಚಾಗಿ ಮೆಟೋಬಾಲಿಕ್‌ ಆಸಿಡೋಸಿಸ್‌ ನಿಂದ ಸಾವಿಗೀಡಾಗಿದೆ’ ಎಂದಿದ್ದಾರೆ.

ಹೊಟ್ಟೆಯಲ್ಲಿತ್ತು ಮಾವಿನಕಾಯಿ
ಗರಳಾಪುರ ಬಳಿ ಸಾವಿಗೀಡಾಗಿರುವ 14 ವರ್ಷದ ಕಾಡಾನೆಯ ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಮಾವಿನಕಾಯಿ ಕಂಡುಬಂದಿದೆ. ಇನ್ನು 35 ವರ್ಷದ ಆನೆಯ ಸಾವಿಗೆ ಸೋಂಕು ಕಾರಣ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ಆನೆಗೆ ಬೇಕಾದ ಮೇವು ಮತ್ತು ನೀರು ವನ್ಯ ಜೀವಿ ಪ್ರದೇಶದಲ್ಲಿ ಸಿಗದಿರುವುದು ಸಾವಿನ ಕಾರಣಗಳಿಗೆ ಸೇರಿವೆ.

ರಾಯಚೂರಲ್ಲಿ ವೃದ್ಧ ಸಾವು
ರಾಯಚೂರು: ಬಿಸಿಲ ಝಳಕ್ಕೆ ವೃದ್ಧನೊಬ್ಬ ಬಸವಳಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಕ್ಲಾಸಪುರ ಗ್ರಾಮದ ರಾಮಣ್ಣ ಕಬ್ಬೇರ್‌ (70) ಮೃತಪಟ್ಟ ವರು. ಭಿಕ್ಷೆ ಬೇಡಿ ಜೀವಿಸುತ್ತಿದ್ದ ಅವರು ರವಿವಾರ ಹೊಟೇಲ್‌ ಬಳಿ ನಿಶ್ಶಕ್ತಿಯಿಂದ ಮಲಗಿದ್ದು ಅಲ್ಲಿಯೇ ಮೃತಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next