ನಿಯಮದ ಪ್ರಕಾರ, ಮೇ 7ರಂದು ಬೆಳಗ್ಗೆ 6 ಗಂಟೆಯಿಂದ ಮೇ 9ರ ಬೆಳಗ್ಗೆ 6 ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಮೇ 9ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆಯವರೆಗೆ 96 ತಾಸುಗಳ ಕಾಲ ನೀರು ಸರಬರಾಜು ಇರಲಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನಕ್ಕೆ 5 ರಿಂದ 5 ಸೆಂ.ಮೀ ಕುಸಿಯುತ್ತಿದೆ. ಸೋಮವಾರ ಬೆಳಗ್ಗೆ 4.38 ಮೀ. ಇದ್ದ ನೀರಿನ ಮಟ್ಟ ಸಂಜೆಯ ವೇಳೆಗೆ 4.34 ಮೀ.ಗೆ ಇಳಿದಿತ್ತು. ಮಂಗಳವಾರ ಡ್ಯಾಂನಲ್ಲಿ ನೀರಿನ ಪ್ರಮಾಣ 4.27 ಮೀ. ಇದೆ. ಪ್ರಸ್ತುತ ರೂಪಿಸಿರುವ ನೀರಿನ ರೇಷನಿಂಗ್ ಸ್ವರೂಪ ಮೇ 21ರ ವರೆಗೆ ಜಾರಿಯಲ್ಲಿರುತ್ತದೆ.
ರೇಷನಿಂಗ್ ಹಿನ್ನೆಲೆಯಲ್ಲಿ ನೀರು ಸರಬರಾಜು ಮಾರ್ಗದಲ್ಲಿರುವ ಕೊನೆಯ ಹಾಗೂ ಎತ್ತರದ ಪ್ರದೇಶಗಳಿಗೆ ನೀರು ಲಭ್ಯತೆ ದುಸ್ತರವಾಗಿದ್ದು ಮಂಗಳೂರಿನ ಜನತೆ ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುವಂತಾಗಿದೆ.
Advertisement