Advertisement

ಶಹಾಪುರದಲ್ಲಿ ವಾಹನ-ಜನರ ಓಡಾಟಕ್ಕಿಲ್ಲ ಬ್ರೇಕ್‌

01:27 PM May 01, 2021 | Team Udayavani |

ಶಹಾಪುರ: ಕೊರೊನಾ ಕರ್ಫ್ಯೂ ಜಾರಿಗೊಳಿಸಿ ನಾಲ್ಕನೇ ದಿನ ಶುಕ್ರವಾರ ನಗರದಲ್ಲಿ ಸಾಮಾನ್ಯವಾಗಿ ವಾಹನಗಳ ಓಡಾಟ ಕಂಡು ಬಂದಿತು. ಎಲ್ಲೆಂದರೆಲ್ಲ ಜನ ಬೈಕ್‌, ಆಟೋದಲ್ಲಿ ಸಂಚರಿಸುತ್ತಿರುವದು ಕಂಡು ಬಂದಿತು. ವಿಷಯ ತಿಳಿದು ನಗರಸಭೆ ಅಧಿಕಾರಿಗಳು ದಾಳಿ ನಡೆದು ಒಂದಿಷ್ಟು ದಂಡ ವಸೂಲಿ ಮಾಡಿರುವುದು ಬಿಟ್ಟರೆ, ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲದಂತೆ ಜನರ ಓಡಾಟ ಕಂಡು ಬಂದಿತು.

Advertisement

ಬೆಳಗ್ಗೆ ನಿಗದಿ ಸಮಯದಲ್ಲೂ ಜನ ಜಂಗುಳಿ ಸಾಮಾನ್ಯವಾಗಿತ್ತು. ಅರ್ಧಂಬರ್ಧ ಮಾಸ್ಕ್ ಧರಿಸಿರುವದು, ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಜನರಿಗೆ ಎಷ್ಟೆ ಟೈಟ್‌ ರೂಲ್ಸ್‌ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ತಿಳಿವಳಿಕೆ ಬಾರದಿದ್ದರೆ ಜನರನ್ನು ಆ ದೇವರೆ ಕಾಪಾಡಬೇಕು ಎಂಬ ಸ್ಥಿತಿಗೆ ತಾಲೂಕು ಆಡಳಿತ ಬಂದಂತಿದೆ.

ಜನರ ಆರೋಗ್ಯ ಸ್ಥಿತಿ ಕೈಮೀರುತ್ತಿದ್ದು, ಕೂಡಲೇ ಕಡಿವಾಣ ಹಾಕದಿದ್ದರೆ ಮುಂದೆ ಸಾಲು ಹೆಣಗಳ ಅನಾಹುತ ಪರಿಸ್ಥಿತಿ ಕಾಣಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳು ಈ ಕೂಡಲೇ ನಗರ ಸ್ಥಿತಿ ಅವಲೋಕನ ಮಾಡಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸುವ ಅಗತ್ಯವಿದೆ ಎಂದು ಬಿಜೆಪಿ ಯುವ ಮುಖಂಡ ಭೀಮಾಶಂಕರ ಕಟ್ಟಿಮನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next