ಲಕ್ನೋ: ಕೋವಿಡ್ ಲಸಿಕೆ ಅಭಿಯಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಲಸಿಕೆ ಪಡೆಯದ ಸರ್ಕಾರಿ ನೌಕರರಿಗೆ ಸಂಬಳ ಇಲ್ಲ” ಎಂದು ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲಾಡಳಿತ ಆದೇಶ ನೀಡಿರುವುದಾಗಿ ಅಧಿಕಾರಿಯೊಬ್ಬರು ಬುಧವಾರ(ಜೂನ್ 02) ತಿಳಿಸಿದ್ದಾರೆ.
ಇದನ್ನೂ ಓದಿ:ಬದುಕಲಿಲ್ಲ ಸೈಕಲ್ ಹುಡುಗಿಯ ತಂದೆ : ಚಿಕಿತ್ಸೆಗಾಗಿ 1200 km ಸೈಕಲ್ ತುಳಿದಿದ್ದ ಬಾಲಕಿ
“ಲಸಿಕೆ ಪಡೆಯದಿದ್ದರೆ, ಸಂಬಳವೂ ಇಲ್ಲ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಅವರು ಮೌಖಿಕ ಆದೇಶ ಹೊರಡಿಸಿದ್ದಾರೆ ಎಂದು ಡೆವಲಪ್ ಮೆಂಟ್ ಅಧಿಕಾರಿ ಚಾರ್ಚಿತ್ ಗೌರ್ ತಿಳಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಖಿಕ ಆದೇಶದ ಪ್ರಕಾರ, ಒಂದು ವೇಳೆ ಸರ್ಕಾರಿ ಉದ್ಯೋಗಿಗಳು ಕೋವಿಡ್ 19 ಲಸಿಕೆ ತೆಗೆದುಕೊಳ್ಳದಿದ್ದರೆ, ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುತ್ತದೆ ಅಲ್ಲದೇ ಮೇ ತಿಂಗಳ ಸಂಬಳವನ್ನು ತಡೆ ಹಿಡಿಯಲಾಗುವುದು ಎಂದು ಗೌರ್ ವಿವರಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಖಜಾನೆ ಅಧಿಕಾರಿ ಮತ್ತು ಇತರ ಇಲಾಖೆಯ ಮುಖ್ಯಸ್ಥರಿಗೆ ಆದೇಶ ಜಾರಿಗೆ ತರಲು ನಿರ್ದೇಶನ ನೀಡಲಾಗಿದ್ದು, ಪಟ್ಟಿಯನ್ನು ತಯಾರಿಸಿ ಲಸಿಕೆ ನೀಡುವಂತೆ ನಿಗಾ ವಹಿಸಲಾಗಿದೆ ಎಂದು ಗೌರ್ ತಿಳಿಸಿದ್ದಾರೆ.