Advertisement

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

10:49 PM Nov 17, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಆಗುವ ಹಿರಿತನ ಮತ್ತು ಸಾಮರ್ಥ್ಯ ಇರುವಂತಹ ಸಮುದಾಯದ ನಾಯಕರಿಗೆ ಯಾವುದೇ ಉಪಯೋಗಕ್ಕೆ ಬಾರದ ಖಾತೆಗಳನ್ನು ನೀಡಿದ್ದಾರೆ. ನಾವೇನು ಜೀತಕ್ಕೆ ಇದ್ದೇವಾ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಗುಡುಗಿದರು.

Advertisement

ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಮಾದಿಗ ಪ್ರಾಧ್ಯಾಪಕರ ವೇದಿಕೆ ಹಮ್ಮಿಕೊಂಡಿದ್ದ “ಒಳಮೀಸಲಾತಿ; ಚಿಂತನ ಮಂಥನ’ ಕುರಿತ ಶಿಬಿರದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಹೊಂದಿರುವ 7 ಬಾರಿ ಸಂಸದರಾದ ಕೆ.ಎಚ್‌. ಮುನಿಯಪ್ಪ ಅವರಿಗೆ ಈ ಹಿಂದೆ ಗೋವಿಂದ ಕಾರಜೋಳ ಅವರಿಗೆ ಹೆಚ್ಚುವರಿಯಾಗಿ ಕೊಟ್ಟಂತಹ ಖಾತೆಯನ್ನು ನೀಡಲಾಗಿದೆ.

ಸಮುದಾಯದ ಇಬ್ಬರು ಸಚಿವರಿದ್ದಾರೆ. ಆ ಇಬ್ಬರಿಗೂ ನಮ್ಮ ಸಮಾಜದವರಿಗೆ ಒಂದು ಲೈಸನ್ಸ್‌ ಕೂಡ ಕೊಡಲು ಆಗುವುದಿಲ್ಲ. ಯಾವುದೇ ಉಪಯೋಗ ಆಗದಿರುವ ಖಾತೆಗಳನ್ನು ಕೊಟ್ಟಾಗ ನಾವು ಹೇಗೆ ಸುಮ್ಮನಿರುವುದು? ಇದೇ ಸಾಲಿನಲ್ಲಿ ಸಚಿವ ಆರ್‌.ಬಿ. ತಿಮ್ಮಾಪುರ, ರಾಜ್ಯಸಭೆ ಮಾಜಿ ಸದಸ್ಯ ಡಾಣ ಎಲ್‌. ಹನುಮಂತಯ್ಯ ಕೂಡ ಇದ್ದಾರೆ. ಇದೇ ಸರಕಾರದಲ್ಲಿ ನಮ್ಮ “ಬ್ರದರ್‌’ಗಳಿಗೇ (ಎಸ್ಸಿ ಬಲ) ಗೃಹ ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ನಮ್ಮವರಿಗೆ ಮಾತ್ರ ಯಾವುದೇ ಉಪಯೋಗಕ್ಕೆ ಬಾರದ ಖಾತೆಗಳನ್ನು ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next