Advertisement

ಇದ್ದೂ ಇಲ್ಲದಂತಾದ ಶೌಚಾಲಯ

01:01 PM Dec 17, 2019 | Suhan S |

ಆಲಮಟ್ಟಿ: ಪ್ರವಾಸಿ ತಾಣವಾಗಿರುವಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿರುವ ಶೌಚಾಲಯಗಳು ಸಮರ್ಪಕ ನಿರ್ವಹಣೆಯಿಲ್ಲದೇ ಯಾವಾಗಲೂ ಬೀಗ ಜಡಿದ ಸ್ಥಿತಿಯಲ್ಲಿರುತ್ತವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

Advertisement

ವಾಣಿಜ್ಯ ಕೇಂದ್ರಗಳಾಗಿರುವ ಮುದ್ದೇಬಿಹಾಳ, ತಾಳಿಕೋಟೆ, ಧಾರ್ಮಿಕ ಕೇಂದ್ರಗಳಾಗಿರುವ ಕೂಡಲಸಂಗಮ, ಯಲಗೂರ, ಯಲ್ಲಮ್ಮನಬೂದಿಹಾಳ ಸೇರಿದಂತೆ ನೂರಾರು ಗ್ರಾಮ ಹಾಗೂ ಕೆಲ ಪಟ್ಟಣದ ನಾಗರಿಕರು ದೂರದ ಪ್ರಯಾಣಕ್ಕಾಗಿ ಆಲಮಟ್ಟಿಯನ್ನೇ ಅವಲಂಬಿಸಿದ್ದಾರೆ. ಪಟ್ಟಣ ಬೃಹತ್‌ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ, ರಾಕ್‌ ಉದ್ಯಾನ, ಮೊಘಲ್‌ ಉದ್ಯಾನ, ಇಟಾಲಿಯನ್‌, ಲವಕುಶ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಸಂಗೀತ ನೃತ್ಯ ಕಾರಂಜಿ, ರಾಷ್ಟ್ರೀಯ ಹೆದ್ದಾರಿ ಹೊಂದಿ ಸುಮಾರು 24 ಸಾವಿರ ಜನಸಂಖ್ಯೆಯನ್ನು ಹೊಂದಿ ನಾಗಾಲೋಟದಲ್ಲಿ ಬೆಳೆಯುತ್ತಿದೆ.

ಇಲ್ಲಿ ಕೃಷ್ಣಾಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ, ಮುಖ್ಯ ಅಭಿಯಂತರರ ಕಚೇರಿ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿ, ವಿವಿಧ ವಿಭಾಗೀಯ ಕಚೇರಿ, ಉಪ ವಿಭಾಗೀಯ ಕಚೇರಿಗಳು, ಅರಣ್ಯ, ತೋಟಗಾರಿಕೆ ಹೀಗೆ ವಿವಿಧ ಕಚೇರಿಗಳನ್ನು ಹೊಂದಿದ್ದು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವದರಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ರೈಲ್ವೆ ಇಲಾಖೆಗೆ ಆದಾಯವಿದೆ.

ನಮ್ಮ ರಾಜ್ಯದವರೇ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರೂ ಕೂಡ ನಿಲ್ದಾಣಗಳಲ್ಲಿ ಪ್ರಯಾಣಿಕರು ಪ್ರಯಾಸಪಡುವಂತಾಗಿದೆ. ಸಂಬಂಧಿಸಿದವರು ರೈಲ್ವೆ ನಿಲ್ದಾಣದಲ್ಲಿರುವ ಶೌಚಾಲಯ ಬೀಗ ಮುಕ್ತಗೊಳಿಸಿ ಶುಚಿಯಾಗಿಡಬೇಕು ಎನ್ನುತ್ತಾರೆ ಮುದ್ದೇಬಿಹಾಳದ ಕಾರ್ಗಿಲ್‌ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣಸಮಿತಿ ಅಧ್ಯಕ್ಷ ಕಿರಣ ಪಾಟೀಲ.ಈ ಕುರಿತು ಪತ್ರಿಕೆ ರೈಲ್ವೆ ನಿಲ್ದಾಣದ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ರೈಲು ಬರುವದಕ್ಕಿಂತ ಮುಂಚಿತವಾಗಿ ಬೀಗ ತೆಗೆಯಲಾಗುವದು, ರೈಲು ತೆರಳಿದ ನಂತರ ಮತ್ತೆ ಬೀಗ ಹಾಕಲಾಗುವದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next