Advertisement

ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ: ಸಚಿವೆ ಶಶಿಕಲಾ ಜೊಲ್ಲೆ

12:40 PM Aug 09, 2021 | Team Udayavani |

ವಿಜಯಪುರ: ಖಾತೆ ನೀಡಿಕೆ ವಿಷಯದಲ್ಲಿ ಯಾವುದೇ ಅಸಮಧಾನ ಇಲ್ಲ. ನೀಡಿರುವ ಖಾತೆಯನ್ನು ವ್ಯವಸ್ಥಿತವಾಗಿ, ಸಮರ್ಥವಾಗಿ ನಿರ್ವಹಿಸುವುದೇ ನಮ್ಮ ಮುಂದಿರುವ ಗುರಿ ಎಂದು ಮುಜರಾಯಿ, ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ನದಿಗಳ ಮಹಾಪೂರ ಸಂಕಷ್ಟ, ಕೋವಿಡ್ ಭೀತಿಯ ಮಧ್ಯೆ ಪರಿಸ್ಥಿತಿ ನಿರ್ವಹಿಸಬೇಕಿದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಖಾತೆಯ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸುವ‌ ಕ್ರಮ ಸರಿಯಲ್ಲ ಎಂದರು.

ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನ ಅಭಿವೃದ್ದಿಗೆ ನಾನು ಬದ್ಧ. ಹೊರ ರಾಜ್ಯ ದೇವಸ್ಥಾನಗಳಿಗೆ ತೆರಳುವ ನಮ್ಮ ರಾಜ್ಯ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಇದನ್ನೂ ಓದಿ:ಸಣ್ಣಪುಟ್ಟ ಅಸಮಾಧಾನ ಇರಬಹುದು, ಆದರೆ…: ಸಿಎಂ ಬಸವರಾಜ ಬೊಮ್ಮಾಯಿ

ಕೆಲಸ ಮಾಡುವವರಿಗೆ ಯಾವ ಖಾತೆ ಇದ್ರೆ ಏನು. ಕೆಲಸ ಮಾಡುವ ಇಚ್ಛೆ ಇತ್ತು, ಜನರಿಗೆ ಸ್ಪಂದಿಸುವ ಇಚ್ಛೆ ಇದ್ದರೆ ಅಷ್ಟು ಸಾಕು. ಸಿಕ್ಕ ಖಾತೆ ಮೂಲಕವೇ ನಾವು ಕೆಲಸ ಮಾಡಬಹುದು ಎಂದು ಖಾತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿರುವ ಸಚಿವರಿಗೆ ಟಾಂಗ್ ನೀಡಿದರು.

Advertisement

ಇಷ್ಟಕ್ಕೂ ಇಂಥ ಸಮಸ್ಯೆ ಕ್ಷಣಿಕವಾಗಿರುತ್ತವೆ, ಇದು ಬಹಳ ದೊಡ್ಡ ವಿಷಯ ಅಲ್ಲ, ಸ್ವಲ್ಪ ಅಸಮಧಾನ ಇರಬಹುದು. ಅದು ನಿವಾರಣೆ ಆಗುತ್ತೆ. ನಮ್ಮ ಪಕ್ಷದ ಹಿರಿಯರು ಇದನ್ನು ಬಗೆರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next