Advertisement

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

12:18 AM May 17, 2022 | Team Udayavani |

ಬೆಂಗಳೂರು: ರಾಜ್ಯಾ ದ್ಯಂತ ಸೋಮವಾರದಿಂದ ಶಾಲೆಗಳು ಆರಂಭವಾಗಿದೆಯಾದರೂ ಸರಕಾರಿ ಶಾಲೆಗಳಲ್ಲಿ ಸಮವಸ್ತ್ರ ವಿತರಿಸಲು ಇನ್ನೂ ಮೂರು ತಿಂಗಳು ಬೇಕಾಗಿದೆ.

Advertisement

ಶಿಕ್ಷಣ ಇಲಾಖೆ ಫೆಬ್ರವರಿಯಲ್ಲಿ ನಡೆಸಿದ ಟೆಂಡರ್‌ ಪ್ರಕ್ರಿಯೆ ರದ್ದಾ ಗಿದ್ದು, ಹೊಸ ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಟೆಂಡರ್‌ ಅಂತಿಮವಾದ ಬಳಿಕ ಸಮ ವಸ್ತ್ರ ವಿತರಣೆ ಆರಂಭವಾಗಲಿದೆ.
ಪ್ರತೀ ವರ್ಷ ಶಾಲೆ ಆರಂಭವಾಗುವ ವೇಳೆಗೆ ಪಠ್ಯಪುಸ್ತಕದ ಜತೆಗೆ ಸಮವಸ್ತ್ರ ವನ್ನು ವಿತರಿಸಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆ ವಿತರಣೆ ಮೇಲೂ ಪರಿಣಾಮ ಬೀರಿದ್ದರಿಂದ ಟೆಂಡರ್‌ ಅಂತಿಮವಾಗಿಲ್ಲ.

ಮುಂದಿನ ವಾರ ಟೆಂಡರ್‌?
ಫೆಬ್ರವರಿಯಲ್ಲಿ ಸಮವಸ್ತ್ರ ವಿತರಣೆ ಸಂಬಂಧ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಅನುದಾನ ನಿಗದಿಯಲ್ಲಿ ಬಟ್ಟೆ ವಿತರಣೆ ಕಂಪೆನಿಗಳು ಹಾಗೂ ಸರಕಾರದ ನಡುವೆ ಒಪ್ಪಂದವಾಗದ ಕಾರಣ ಟೆಂಡರ್‌ ಪ್ರಕ್ರಿಯೆಗಳು ರದ್ದಾಗಿದೆ.
ಕೊರೊನಾ ಪೂರ್ವದ ಅವಧಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತಿತ್ತು. ಈ ಪೈಕಿ ಮೊದಲ ಸೆಟ್‌ ರಾಜ್ಯ ಮತ್ತು ಎರಡನೇ ಸೆಟ್‌ ಅನ್ನು ಕೇಂದ್ರ ಸರಕಾರದ್ದಾಗಿತ್ತು. ಮೊದಲ ಸೆಟ್‌ ಅನ್ನು ಸರಕಾರವೇ ಹೊಲಿಸಿ ವಿತರಿಸಿದರೆ, ಎರಡನೇ ಸೆಟ್‌ನ ಬಟ್ಟೆ ವಿತರಿಸಲಾಗುತ್ತಿತ್ತು.ಸಂಬಂಧಪಟ್ಟ ಶಾಲಾಭಿವೃದ್ಧಿ ಮತ್ತು ನಿರ್ವಹಣ ಸಮಿತಿ (ಎಸ್‌ಡಿಎಂಸಿ) ಗಳು ಹೊಲಿಸಿ ಮಕ್ಕಳಿಗೆ ವಿತರಣೆ ಮಾಡುತ್ತಿದ್ದವು.

ಈಗ ಎರಡೂ ಜತೆ ಸಮವಸ್ತ್ರ
ವನ್ನು 2021ರಿಂದ ರಾಜ್ಯ ಸರಕಾರವೇ ನೀಡಲು ನಿರ್ಣಯಿಸಿದೆ. 2ನೇ ಜತೆ ಸಮವಸ್ತ್ರದ ಅನುದಾನವನ್ನು ರಾಜ್ಯ ಸರಕಾರಕ್ಕೆ ವಿತರಿಸಲು ಕೇಂದ್ರ ಒಪ್ಪಿತ್ತು. ಅದಾದ ಬಳಿಕ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಎರಡೂ ಜತೆ ಸಮವಸ್ತ್ರ ವಿತರಣೆಯಾಗಿಲ್ಲ. ಕಳೆದ ವರ್ಷ ಕೇವಲ ಒಂದು ಜತೆ ಮಾತ್ರ ವಿತರಿಸಲಾಗಿತ್ತು.

ಸಮವಸ್ತ್ರ ವಿತರಣೆ
ಟೆಂಡರ್‌ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳಿದ್ದು, ಶೀಘ್ರ ವೇ ಅವು ಗಳನ್ನು ಬಗೆಹರಿಸಿ ಆದಷ್ಟು ಬೇಗ ಮಕ್ಕಳಿಗೆ ಸಮವಸ್ತ್ರ ವಿತರಿ ಸಲು ಕ್ರಮ ವಹಿಸ ಲಾಗುವುದು.
– ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next