Advertisement

ಜಾತ್ರೆ-ರಥೋತ್ಸವದಲ್ಲಿ ಅನ್ಯಧರ್ಮಿಯರ ವ್ಯಾಪಾರಕ್ಕೆ ಅವಕಾಶ ಬೇಡ

05:44 PM Mar 29, 2022 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ನಡೆಯುವ ಜಾತ್ರಾ ಮಹೋತ್ಸವ ರಥೋತ್ಸವ ಇತರೆ ಯಾವುದೇ ಹಿಂದೂ ಕಾರ್ಯಕ್ರಮಗಳಲ್ಲಿ ಹಿಂದೂಗಳಲ್ಲದ ಅನ್ಯಧರ್ಮಿಯರಿಗೆ ವ್ಯಾಪಾರ, ವಹಿವಾಟು ಇತರೆ ಚಟುವಟಿಕೆ ನಡೆಸಲು ಅವಕಾಶ ನೀಡದಿರುವಂತೆ ಒತ್ತಾಯಿಸಿ ನಗರದ ಭಜರಂಗದಳದ ತಾಲೂಕು ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ವಿಜಯನಗರ ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಹಿಂದೂ ದೇವರುಗಳ ಜಾತ್ರೆ, ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ಅಧಿನಿಯಮ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರ ಮಳಿಗೆ, ವಸತಿಗೃಹ, ವ್ಯಾಪಾರ, ವಹಿವಾಟು ಇತರೆ ಚಟುವಟಿಕೆ ನಡೆಸಲು ಅನುಮತಿ ನೀಡಬಾರದು. ಈ ಹಿಂದೆ ಹಿಂದೂಗಳಲ್ಲದ ಅನ್ಯಧರ್ಮಿಯರಿಗೆ ವ್ಯಾಪಾರ ವಹಿವಾಟು ನಡೆಸಲು ನೀಡಿರುವ ಅನುಮತಿ, ಗುತ್ತಿಗೆಯನ್ನು ಕೂಡಲೇ ರದ್ದುಗೊಳಿಸಬೇಕು. ಈ ಮೂಲಕ ಹಿಂದೂಗಳಿಗೆ ಪರವಾನಿಗೆ ನೀಡುವ ಮೂಲಕ ಸರ್ಕಾರದ ಆದೇಶ ಪಾಲಿಸಬೇಕು ಎಂದು ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಅನ್ಯಧರ್ಮಿಯರಿಗೆ ಹಿಂದೂ ದೇವಾಲಯಗಳ ಹತ್ತಿರ ವ್ಯಾಪಾರ-ವಹಿವಾಟು ನಡೆಸಲು ಹಿಂದೂವೇತರಿಗೆ ಯಾವುದೇ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಮುಖಂಡರಾದ ನರಸಿಂಹ ಮೂರ್ತಿ, ತಿಪ್ಪೇಸ್ವಾಮಿ, ಗಂಗಾಧರ,ನಾಗರಾಜ, ಅಶ್ವಿ‌ನ್‌ ಕುಮಾರ್‌, ಮಂಚಯ್ಯ, ಸತೀಶ್‌, ಮಾಹಾಂತೇಶ್‌, ನಾಗಾರ್ಜುನ ಹಾಗೂ ಪ್ರಸನ್ನ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next