Advertisement

ಗಂಗಾವತಿಯಲ್ಲಿ ಕಠಿಣ ನಿಯಮವಿಲ್ಲ: ಯಥಾ ರೀತಿ ಜನರ ಓಡಾಟ, ಕದ್ದುಮುಚ್ಚಿ ಬಟ್ಟೆ ಮಾರಾಟ

09:14 AM May 10, 2021 | Team Udayavani |

ಗಂಗಾವತಿ: ಸೋಮವಾರದಿಂದ ಕೋವಿಡ್ ಕರ್ಪ್ಯೂನಲ್ಲಿ ಇನ್ನಷ್ಟು ಕಠಿಣ ನಿಯಮಗಳು ಜಾರಿಯಾಗಿದೆ. ಆದರೆ ಗಂಗಾವತಿ ನಗರದಲ್ಲಿ ಏನೂ ಬದಲಾಗಲಿಲ್ಲ. ಕಾರು, ಆಟೋ, ಬೈಕ್ ಓಡಾಡುತ್ತಿವೆ.

Advertisement

ಓಎಸ್ ಬಿ ರೋಡ್ ಹಾಗೂ ಮುಚಿಗೇರ್ ಓಣಿ ರಸ್ತೆಯಲ್ಲಿ ಈಗಲೂ ಕೆಲ ಪ್ರಭಾವಿ ವ್ಯಕ್ತಿಗಳ ಬಟ್ಟೆ ಅಂಗಡಿಗಳಲ್ಲಿ ಶೆಟರ್ ಹಾಕಿಕೊಂಡು ಭರ್ಜರಿಯಾಗಿ ವ್ಯಾಪಾರ ಮಾಡಲಾಗುತ್ತಿದೆ. ಪೊಲೀಸರು ನಗರಸಭೆ ಹಾಗೂ  ವಾಣಿಜ್ಯ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ನಿಂತು ಬರೀ ಬೈಕ್ ಸವಾರರ ಗುರುತಿನ ಚೀಟಿ ಮತ್ತು ಮನೆಯಿಂದ ಹೊರಗೆ ಬಂದ ಕಾರಣ ಕೇಳಿ ಬಿಡುತ್ತಿದ್ದಾರೆ.

ಇದನ್ನೂ ಓದಿ:ಹುಣಸೂರಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್: ಬೀದಿಗಿಳಿದ ವಾಹನಗಳು ಸೀಜ್

ಸರಿಯಾಗಿ ಕಾರಣ ಹೇಳದ ಬೈಕ್ ಸವಾರರಿಗೆ ದಂಡ ಹಾಕಲು ಮಾತ್ರ ಮೀಸಲಾಗಿದ್ದಾರೆ. ಪುಟ್ ಪಾತ್ ಮೇಲಿನ ಚಹಾ ಅಂಗಡಿಗಳಲ್ಲಿ ಪಾರ್ಸೆಲ್ ಕೊಡದೇ ಅಲ್ಲೇ ಉಪಹಾರ ನೀಡಲಾಗುತ್ತಿದೆ. ಜನರ ದಟ್ಟಣೆ ಎಲ್ಲೆಡೆ ಕಂಡು ಬರುತ್ತಿದೆ.

Advertisement

ವಿಶೇಷವಾಗಿ ಓಎಸ್ ಬಿ ರೋಡಿನಲ್ಲಿ ಅಂಗಡಿಗಳು ಮಾತ್ರ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಕೋವಿಡ್ ಕರ್ಪ್ಯೂ ಕಠಿಣ ರೂಲ್ಸ್ ಕಂಡು ಬರುತ್ತಿಲ್ಲ

ಇದರಿಂದಾಗಿ ಹೆಚ್ಚು ಜನ ಸೇರುತ್ತಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲಾಡಳಿತ ಕೊರೊನಾ ಜಾಗೃತಿ ಮೂಡಿಸಲು ಹಗಲಿರುಳು ಕೆಲಸ ಮಾಡಿತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next