Advertisement
ಪಾಲಿಕೆಯ ಕೌನ್ಸಿಲ್ ವಿಭಾಗವನ್ನು ಕಾಗದ ರಹಿತಗೊಳಿಸುವ ಉದ್ದೇಶದಿಂದ ಕಳೆದ ವರ್ಷ ಪಾಲಿಕೆ ಸದಸ್ಯರಿಗೆ ಟ್ಯಾಬ್ ನೀಡಲಾಗಿದ್ದು, ಪಾಲಿಕೆಯ ಮಾಹಿತಿ ನೀಡುವ ಇ-ಕೌನ್ಸಿಲ್ ಆ್ಯಪ್ ನ್ನು ಅಳಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ಮುಂದಿನಸಭೆಯ ಎಲ್ಲ ಮಾಹಿತಿ ಇ-ಕೌನ್ಸಿಲ್ ಆ್ಯಪ್‌ನಲ್ಲಿ ಲಭ್ಯವಾಗಲಿದ್ದು, ಕೌನ್ಸಿಲ್ ಹಾಗೂ ಪಾಲಿಕೆ ಸದಸ್ಯರ ನಡುವಿನ ಕಾಗದ ವ್ಯವಹಾರ ಅಂತ್ಯವಾಗಲಿದೆ.
ಪಾಲಿಕೆ ಮಾಸಿಕ ಸಭೆ ನಡೆಯುವ ದಿನಾಂಕ, ವಿಷಯ ಸೂಚಿ, ಸಭೆಯ ನಿರ್ಣಯಗಳು, ನಡಾವಳಿಗಳು, ಸುತ್ತೋಲೆ ಹಾಗೂ ಕಚೇರಿ ಸಂಬಂಧಿತ ಮಾಹಿತಿಯನ್ನು ಇನ್ನು ಮುಂದೆ ಆ್ಯಪ್ ಮೂಲಕ ಕಳುಹಿಸಲಾಗುತ್ತದೆ. ಇದರಿಂದಾಗಿ ಕಾಗದ ಬಳಕೆ ಕಡಿಮೆಯಾಗಲಿದ್ದು, ಸಮಯವೂ ಉಳಿತಾಯವಾಗಲಿದೆ ಎಂಬುದು ಕೌನ್ಸಿಲ್ ವಿಭಾಗದ ಅಧಿಕಾರಿಗಳ ಅಭಿಪ್ರಾಯವಾಗಿದೆ.
ರಂದು ವಿಷಯ ಸೂಚಿ ಸಭೆ ನಡೆಯಲಿದ್ದು, ಸೂಚನಾ ಪತ್ರವನ್ನು ಮೇಯರ್, ಆಯುಕ್ತರು, ಆಡಳಿತ ಪಕ್ಷ ನಾಯಕರು, ವಿರೋಧಪಕ್ಷ ನಾಯಕರು ಹಾಗೂ ಜೆಡಿಎಸ್ ನಾಯಕರಿಗೆ ಕಳುಹಿಸಲಾಗಿದೆ. ಆದರೆ, ಹಿರಿಯ ಸದಸ್ಯರೊಬ್ಬರು ಟ್ಯಾಬ್‌ನಲ್ಲಿ ಹಾಕಿದರೆ ನೋಡಲು ಸಾಧ್ಯವಿಲ್ಲ. ವಿಷಯಸೂಚಿ ಕಳುಹಿಸಿ ಎಂದು ಕೌನ್ಸಿಲ್ ಕಾರ್ಯದರ್ಶಿಗಳಿಗೆ ಕರೆ ಮಾಡಿದ್ದಾರೆ. ಬಹುತೇಕ ಟ್ಯಾಬ್‌ಗಳು ಬೆಂಬಲಿಗರ ಪಾಲು: ಕಾಗದ ರಹಿತ ಆಡಳಿತಕ್ಕಾಗಿ ಪಾಲಿಕೆಯಿಂದ ಪ್ರತಿಯೊಬ್ಬ ಪಾಲಿಕೆ ಸದಸ್ಯರಿಗೆ 44 ಸಾವಿರ ರೂ. ಮೌಲ್ಯದ ಟ್ಯಾಬ್ ನೀಡಲಾಗಿದೆ. ಆದರೆ, ಬಹುತೇಕ ಪಾಲಿಕೆ ಸದಸ್ಯರ ಬಳಿ ಸದ್ಯ ಟ್ಯಾಬ್‌ಗಳೇ ಇಲ್ಲ. ಪಾಲಿಕೆಯಿಂದ ಕಚೇರಿ ಉದ್ದೇಶಕ್ಕಾಗಿ ನೀಡಿದ ಟ್ಯಾಬ್‌ಗಳನ್ನು ಬೆಂಬಲಿಗರು, ಮೊಮ್ಮೊಕ್ಕಳಿಗೆ ನೀಡಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಟ್ಯಾಬ್ ಪಡೆದಿರುವ ಬಹುತೇಕ ಪಾಲಿಕೆ ಸದಸ್ಯರು ಈವರೆಗೆ ಇ-ಕೌನ್ಸಿಲ್ ಆ್ಯಪ್‌ನ್ನು ಟ್ಯಾಬ್‌ಗಳಿಗೆ ಅಳವಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
99 ಲಕ್ಷ ರೂ. ಮೊತ್ತದ ಯೋಜನೆ: ಪಾಲಿಕೆ ಸದಸ್ಯರಿಗೆ ಆ್ಯಪಲ್ ಸಂಸ್ಥೆಯ 225 ಟ್ಯಾಬ್‌ಗಳನ್ನು ನೀಡಲು ಪ್ರತಿ ಟ್ಯಾಬ್‌ಗ 38,600 ರೂ. ವೆಚ್ಚ ಮಾಡಲಾಗಿತ್ತು. ಟ್ಯಾಬ್‌ನ್ನು ಜಾಗ್ರತೆಯಿಂದ ಇಡಲು 2 ಸಾವಿರ ಮೌಲ್ಯದ ಪೌಚ್, ತಂತ್ರಾಂಶ ಹಾಗೂ ಸದಸ್ಯರಿಗೆ ತರಬೇತಿ ನೀಡಲು ಪ್ರತಿ ಟ್ಯಾಬ್‌ಗ 3,400 ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಂದು ಟ್ಯಾಬ್‌ಗ 44 ಸಾವಿರ ರೂ.ಗಳಂತೆ ಒಟ್ಟು ಯೋಜನೆಗೆ 99 ಲಕ್ಷ ರೂ. ಖರ್ಚು ಮಾಡಲಾಗಿ¨
ಪಾಲಿಕೆ ಸಭೆಯ ಮಾಹಿತಿ, ನಡಾವಳಿ, ವಿಷಯ ಸೂಚಿ ಹಾಗೂ ನಿರ್ಣಯಗಳನ್ನು ಇನ್ನು ಮುಂದೆ ಟ್ಯಾಬ್ ಮೂಲಕ ತಿಳಿಸಲಾಗುವುದು. ಅದೇ ಉದ್ದೇಶದಿಂದ ಈಗಾಗಲೇ ಪಾಲಿಕೆಯ ಪ್ರತಿಯೊಬ್ಬ ಸದಸ್ಯರಿಗೆ ಟ್ಯಾಬ್ ನೀಡಲಾಗಿದ್ದು, ಆ ಮೂಲಕ ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ.ಎಂ.ಶಿವರಾಜು, ಆಡಳಿತ ಪಕ್ಷ ನಾಯಕ