Advertisement

ವೇದಿಕೆಯಲ್ಲಿ ದೈವಾರಾಧನೆ ಪ್ರದರ್ಶನ ಸಲ್ಲ: ಡಾ|ಏರ್ಯ ಆಳ್ವ

09:49 AM Jun 17, 2019 | keerthan |

ಉಡುಪಿ: ದೈವಾರಾಧನೆ ಆರಾಧನ ಕಲೆ. ಅದನ್ನು ವೇದಿಕೆಯಲ್ಲಿ ಪ್ರದರ್ಶಿಸುವುದು ಸಲ್ಲದು. ದೈವಗಳ ಬಣ್ಣಗಾರಿಕೆ, ನೃತ್ಯಗಾರಿಕೆ, ಮಾತುಗಾರಿಕೆಯಲ್ಲಿ ಭಿನ್ನತೆ ಇದೆ. ಹತ್ತಾರು ಜನಾಂಗ, ಕುಟುಂಬಗಳು ದೈವಾರಾಧನೆಯಿಂದ ಒಂದಾಗಿವೆ ಎಂದು ಕರ್ನಾಟಕ ಜಾನಪದ ಪರಿಷತ್‌ ಸದಸ್ಯ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.

Advertisement

ಕರ್ನಾಟಕ ಜಾನಪದ ಪರಿಷತ್‌ ಆಶ್ರಯದಲ್ಲಿ ರವಿವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಜಾನಪದ ಘಟಕದ  ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿರಿಯರ ಕೊಡುಗೆ ಅಪಾರ
ಪಾಡªನಗಳು ಇಂಗ್ಲಿಷ್‌ ಭಾಷೆಗೆ ಅನುವಾದವಾಗಬೇಕು. ಜನಪದ ಬೆಳೆಯಲು ಹಿರಿಯರ ಕೊಡುಗೆ ಅಪಾರವಾಗಿದೆ ಎಂದರು. ರಾಜ್ಯ ಹಣಕಾಸು ಆಯೋಗ ಅನುಷ್ಠಾನ ಕಾರ್ಯಪಡೆಯ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಮಾತನಾಡಿ, ಭಾರತದ ಸಂಸ್ಕೃತಿಗೆ ಹತ್ತಿರವಾದ ಜಾನಪದ ಕಲೆ ಇನ್ನಷ್ಟು ಹೆಚ್ಚು ಬೆಳೆಯ ಬೇಕು ಎಂದರು. ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ. ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ| ಗಣನಾಥ ಎಕ್ಕಾರು ಮುಖ್ಯ ಅತಿಥಿಯಾಗಿದ್ದರು.

ಸಮ್ಮಾನ
ಜಾನಪದ ವಿದ್ವಾಂಸರಾದ ಎಸ್‌.ಎ. ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್‌, ರಮೇಶ್‌ ಕಲ್ಮಾಡಿ ಅವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.  ಶಾಸಕ ರಘುಪತಿ ಭಟ್‌, ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಸಂಘಟನ ಕಾರ್ಯದರ್ಶಿ ರವಿರಾಜ ನಾಯಕ್‌, ಎಂಜಿಎಂ ಕಾಲೇಜು ಪ್ರಾಂಶುಪಾಲ ಎಂ.ಜಿ. ವಿಜಯ್‌, ಶಂಭು ಶೆಟ್ಟಿ, ಗೋಪಾಲ ಸಿ. ಬಂಗೇರ, ತಾಲೂಕು ಘಟಕದ ಅಧ್ಯಕ್ಷರಾದ ಉಡುಪಿಯ ಸಂಜೀವ ಟಿ. ಕರ್ಕೇರ, ಕಾಪುವಿನ ಡಿ. ಶ್ರೀಧರ ಶೇಣವ, ಕಾರ್ಕಳದ ಎನ್‌.ಎಂ. ಹೆಗ್ಡೆ, ಹೆಬ್ರಿಯ ಟಿ.ಜಿ. ಆಚಾರ್‌, ಬೈಂದೂರಿನ ವಿಶ್ವನಾಥ ಶೆಟ್ಟಿ, ಕುಂದಾಪುರದ ರತ್ನಾಕರ ಶೆಟ್ಟಿ, ಬ್ರಹ್ಮಾವರದ ನೇರಿ ಕರ್ನೇಲಿಯೋ ಉಪಸ್ಥಿತರಿದ್ದರು.

ಸುನಿಲ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಎನ್‌.ಎಂ. ಹೆಗ್ಡೆ ನಿರೂಪಿಸಿದರು. ಇತ್ತೀಚೆಗೆ ನಿಧನ ಹೊಂದಿದ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರಿಗೆ ಸಂತಾಪ ಸೂಚಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next