Advertisement

ಸಣ್ಣ ಆ್ಯಪ್‌ ನಿರ್ವಹಿಸೋಕೂ ಬರೋಲ್ಲ!

12:56 PM Dec 14, 2017 | |

ಬೆಂಗಳೂರು: ನಾಗರಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ಕಳೆದ ಸೋಮವಾರ “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಬಿಡುಗಡೆಗೊಳಿಸಿದ್ದು, ಆ್ಯಪ್‌ ಕಾರ್ಯವೈಖರಿಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸಾರ್ವಜನಿಕರು ನೀಡುವ ದೂರುಗಳಿಗೆ ಕೂಡಲೇ ಸ್ಪಂದಿಸುವ ಉದ್ದೇಶದಿಂದ ಬಿಬಿಎಂಪಿ ನೂತನ ಆ್ಯಪ್‌ ಬಿಡುಗಡೆಗೊಳಿಸಿತ್ತು. ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಫೋಟೋ ಸಮೇತವಾಗಿ ಸಮಸ್ಯೆಗಳ ಕುರಿತು ದೂರು ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಸ್ವಯಂಚಾಲಿತವಾಗಿ ದೂರು ನೀಡಿದ ಸ್ಥಳದ ಮಾಹಿತಿ ಆಯಾ ವಾರ್ಡ್‌ ಎಂಜಿನಿಯರ್‌ಗಳಿಗೆ ತಲುಪುತ್ತದೆ ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದರು. 

ಆದರೆ, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ದೂರು ನೀಡಲು ಮುಂದಾದ ಸಾರ್ವಜನಿಕರಿಗೆ ಹಲವಾರು ತಾಂತ್ರಿಕ ತೊಂದರೆಗಳು ಎದುರಾಗಿವೆ. ಸಮರ್ಪಕವಾಗಿ ಆ್ಯಪ್‌ ಅಭಿವೃದ್ಧಿಪಡಿಸದ ಪಾಲಿಕೆಯನ್ನು ಸಾರ್ವಜನಿಕರು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಆ್ಯಪ್‌ನಲ್ಲಿರುವ ಸಮಸ್ಯೆಗಳ ಕುರಿತು ಕಮೆಂಟ್‌ ಮಾಡಿ, ಕಡಿಮೆ ರೇಟಿಂಗ್‌ ನೀಡಿದ್ದಾರೆ.

ಎರಡೇ ದಿನಕ್ಕೆ ಅಪ್‌ಡೇಟ್‌ ಕೇಳಿದ ಆ್ಯಪ್‌: ಪಾಲಿಕೆಯಿಂದ ಅಭಿವೃದ್ಧಿಪಡಿಸಲಾದ “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಎರಡನೇ ದಿನವೇ ಅಪ್‌ಡೇಟ್‌ ಕೇಳಿದೆ. ಸಾಮಾನ್ಯವಾಗಿ ಯಾವುದೇ ಒಂದು ಆ್ಯಪ್‌ನಲ್ಲಿ ಹೊಸ ಅಂಶಗಳನ್ನು ಸೇರಿಸಿದಾಗ ಅಪ್‌ಡೆಟ್‌ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ.

ಇದರೊಂದಿಗೆ ಹೊಸದಾಗಿ ಸೇರಿಸಲಾಗಿರುವ ಅಂಶಗಳು ಯಾವುವು ಎಂಬ ಮಾಹಿತಿ ನೀಡಲಾಗುತ್ತದೆ. ಆದರೆ, ಈ ಆ್ಯಪ್‌ನಲ್ಲಿ ಸೇರಿಸಲಾಗಿರುವ ಹೊಸ ಅಂಶಗಳು ಯಾವುವು ಎಂಬ ಮಾಹಿತಿ ನೀಡಲಾಗಿಲ್ಲ. ಜತೆಗೆ ಅಪ್‌ಡೆಟ್‌ ಮಾಡದಿದ್ದರೆ ಆ್ಯಪ್‌ ಓಪನ್‌ ಆಗದಿರುವುದಕ್ಕೆ ಬಳಕೆದಾರರು ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಪ್ಲೇಸ್ಟೋರ್‌ನಲ್ಲಿನ ಕಮೆಂಟ್‌ಗಳು 
ಬಿಬಿಎಂಪಿಗೆ ಒಂದು ಸಣ್ಣ ಆ್ಯಪ್‌ ನಿರ್ವಹಣೆ ಮಾಡಲೂ ಬರುವುದಿಲ್ಲವೆಂದರೆ ಇದಕ್ಕಿಂತ ನಾಚಿಗೇಡಿನ ಸಂಗತಿ ಮತ್ತೂಂದಿಲ್ಲ.
-ಶ್ರೀನಿವಾಸ ಮಧುಸೂಧನ್‌

ಇದೊಂದು ಅನುಪಯುಕ್ತ ಆ್ಯಪ್‌. ಜತೆಗೆ ಇದು ಸಮರ್ಪಕವಾದ ಸ್ಥಳ (ಲೊಕೇಷನ್‌) ತೋರಿಸುತ್ತಿಲ್ಲ. ಎಲ್ಲ ಆದ ನಂತರ ಕೊನೆಗೆ “ಒಪ್ಸ್‌’ ಎಂದು ತೋರಿಸುತ್ತದೆ.
-ವರ್ಷಪ್ರಭಾ

ಆ್ಯಪ್‌ “ಐಒಎಸ್‌’ ಮೊಬೈಲ್‌ಗ‌ಳಲ್ಲಿಯೂ ಲಭ್ಯವಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ, ಐಒಎಸ್‌ ಆ್ಯಪ್‌ ಸ್ಟೋರ್‌ನಲ್ಲಿ ಆ್ಯಪ್‌ ದೊರೆಯುತ್ತಿಲ್ಲ.
-ಮೀನಾ ಶ್ರೀಕಾಂತ್‌

ನಾಗರಿಕರ ಸಮಸ್ಯೆ ಕೇಳಲು ಹತ್ತಾರು ಆ್ಯಪ್‌ಗ್ಳಿದ್ದರೂ ಇದೀಗ ಮತ್ತೂಂದು ಆ್ಯಪ್‌ ಅನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ. ಇದಾದ ಬಳಿಕ ಮತ್ತೂಂದು ಆ್ಯಪ್‌ ಬಾರದಿದ್ದರೆ ಸಾಕು.
-ಸಿದ್ದಪ್ಪ ದಿಂಡವಾರ್‌

Advertisement

Udayavani is now on Telegram. Click here to join our channel and stay updated with the latest news.

Next