ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ -19 ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಅಥವಾ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಜಿಲ್ಲೆಯಲ್ಲಿ ಕೋವಿಶೀಲ್ಡ್ ಮೊದಲ ಲಸಿಕೆ ಪಡೆದ ಆರೋಗ್ಯ ಇಲಾಖೆಯ ಇಬ್ಬರು ಪ್ರತಿಕ್ರಿಯಿಸಿದ್ದಾರೆ.
ಆರೋಗ್ಯ ಇಲಾಖೆಯ ಡಿ ದರ್ಜೆ ನೌಕರ 57 ವರ್ಷದ ಲಕ್ಷ್ಮಣ ಕೊಳೂರಗಿ ಮೊದಲು ಕೋವಿಶೀಲ್ಡ್ ಲಸಿಕೆ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಕ್ರಿಯಿಸಿ, ತಮಗೆ ಯಾವುದೇ ಅಡ್ಡ ಪರಿಣಾಮ ಆಗಲಿಲ್ಲ ಎಂದರು.
ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ
ಜಿಲ್ಲೆಯಲ್ಲಿ ಮೊದಲು ಕೋವಿಶೀಲ್ಡ್ ಲಸಿಕೆ ಪಡೆದ ಎರಡನೇಯ ವ್ಯಕ್ತಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ 59 ವರ್ಷದ ಶ್ರೀಶೈಲ ಶಿವಪ್ಪ ಚಟ್ಟೇರ ಕೋವಿಡ್ ಸೋಂಕು ರೋಗ ನಿಗ್ರಹಕ್ಕಾಗಿ ದೇಶಿ ನಿರ್ಮಿತ ಲಸಿಕೆಯಿಂದ ಅಡ್ಡ ಪರಿಣಾಮ ಆಗದು. ಹೀಗಾಗಿ ಸಾರ್ವಜನಿಕರು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಭಯಪಡುವ ಅವಶ್ಯಕತೆ ಇಲ್ಲ: ಚಾಮರಾಜನಗರದಲ್ಲಿ ಮೊದಲ ಲಸಿಕೆ ಪಡೆದ ಮಂಜುನಾಥ್ ಅವರ ಅಭಿಪ್ರಾಯ