Advertisement

ರಾಜ್ಯದಲ್ಲಿ ಈಗಲೂ ಐದು ಲಕ್ಷ ಕೋವಿಡ್ ಲಸಿಕೆ ದಾಸ್ತಾನಿದೆ: ಸಚಿವ ಸುಧಾಕರ್

03:03 PM Jun 29, 2021 | Team Udayavani |

ಮೈಸೂರು: ದಿನಕ್ಕೆ ಈಗಲೂ ಎರಡು ಮೂರು ಲಕ್ಷ ವ್ಯಾಕ್ಸಿನ್ ಕೊಡುತ್ತಿದ್ದೇವೆ. ಈಗಲೂ ನಮ್ಮ ಬಳಿ ಐದು ಲಕ್ಷ ವಾಕ್ಸಿನ್ ದಾಸ್ತಾನು ಇದೆ. ರಾಜ್ಯದಲ್ಲಿ ಲಸಿಕೆ ಇಲ್ಲ ಎನ್ನುವ ಪರಿಸ್ಥಿತಿಯೇ ಬಂದಿಲ್ಲ ಎಂದ ಆರೋಗ್ಯ ಸಚಿವ ಸುಧಾಕರ್ ರಾಜ್ಯದಲ್ಲಿ ವಾಕ್ಸಿನ್ ಕೊರತೆಯೇ ಇಲ್ಲ ಎಂದರು.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ. ನಾಳೆ ಮತ್ತಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದು ಎಂದರು.

ಇದನ್ನೂ ಓದಿ:ಸಾಲ ತಂದಾದರೂ ನೀರಾವರಿ ಯೋಜನೆಗಳ ಕಾಮಗಾರಿ ಮುಗಿಸುತ್ತೇವೆ: ಸಿಎಂ ಯಡಿಯೂರಪ್ಪ

20 ಹಾಟ್ ಸ್ಪಾಟ್: ರಾಜ್ಯದಲ್ಲಿ ಒಟ್ಟು 20 ಕೋವಿಡ್ ಹಾಟ್ ಸ್ಪಾಟ್ ಗಳನ್ನು ಗುರುತಿಸಿದ್ದೇವೆ. ಮೈಸೂರಿನಲ್ಲಿ ಎರಡು ಹಾಟ್ ಸ್ಪಾಟ್ ಇದೆ. ಪಿರಿಯಾಪಟ್ಟಣ ಹಾಗೂ ಬನ್ನೂರು ಎರಡು ಹಾಟ್ ಸ್ಪಾಟ್ ಆಗಿದೆ. ಇದನ್ನು ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ ಎಂದ ಸಚಿವ ಸುಧಾಕರ್, ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next