ರಾಯಚೂರು: ರಷ್ಯಾದಿಂದ ಬರುತ್ತಿದ್ದ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ದೇಶದಲ್ಲಿ ಕಲ್ಲಿದ್ದಿಲಿನ ಬಳಕೆ ಹೆಚ್ಚಾಗಿದೆ. ಆದರೆ, ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು ಕೊರತೆಯಾಗಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ತಾಲೂಕಿನ ಶಕ್ತಿನಗರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಿದ್ಯುತ್ ಘಟಕಗಳಲ್ಲಿ 10 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಆರ್ ಟಿಪಿಎಸ್ ಗೆ ಸಿಂಗರೇಣಿಯಿಂದ ನಿತ್ಯ 7 ರೇಕ್ ಕಲ್ಲಿದ್ದಲು ಬರಬೇಕಿತ್ತು. ಅದನ್ನು 9-10 ರೇಕ್ ಗಳಿಗೆ ಹೆಚ್ಚಿಸಲಾಗಿದೆ. ಮಹಾನದಿ, ಎಮ್ ಪಿಎಲ್ ನಿಂದಲೂ ಕಲ್ಲಿದ್ದಲು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಎರಡು ದೊಡ್ಡ ಕಲ್ಲಿದ್ದಲು ಗಣಿಗಳನ್ನು ಎಲೊಕೇಶನ್ ಮಾಡಲಾಗಿದೆ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪರ ಅವಧಿಯಲ್ಲಿ ಒಂದು ಗಣಿಯಿಂದ 1 ರೇಕ್ ಬರುತ್ತಿದ್ದು, ಅದನ್ನು ಹೆಚ್ಚಿಸುವಂತೆ ಕೋರಲಾಗಿದೆ. ಮಂದಾಕಿನಿ ಕೋಲ್ ಬ್ಲಾಕ್ ಅಲೊಕೇಷನ್ ಮಾಡಿ ಪೂರೈಕೆ ಹೆಚ್ಚಿಸಲಾಗಿದೆ ಎಂದರು.
ಇದನ್ನೂ ಓದಿ:ಅಂಜನಾದ್ರಿ ಆನೆಗೊಂದಿ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಸಚಿವರ ಮಲತಾಯಿ ಧೋರಣೆ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಗ್ಗಿದ ಪರಿಣಾಮ ವಿದ್ಯುತ್ ಘಟಕಗಳನ್ನು ಸ್ಥಗಿತ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಇಂಧನ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ದೇಶದಲ್ಲಿ ನಿತ್ಯ 3.1 ಬಿಲಿಯನ್ ಯುನಿಟ್ ಬೇಡಿಕೆ ಇತ್ತು. ಅದು ಈಗ 3.4 ಬಿಲಿಯನ್ ಯುನಿಟ್ ಗೆ ಹೆಚ್ಚಾಗಿದೆ. ನಿತ್ಯ 2 ಮಿಲಿಯನ್ ಟನ್ ಕಲ್ಲಿದ್ದಲು ಬಳಕೆಯಾಗುತ್ತಿದೆ ಎಂದು ವಿವರಿಸಿದರು.
ಸರ್ಕಾರಿ ಸ್ಥಳ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಲ್ಲ ಬುಲ್ಡೋಜರ್ ಮೂಲಕ ಧ್ವಂಸ ಮಾಡುತ್ತೇವೆ. ಸಕ್ರಮ ಇದ್ದಲ್ಲಿ ಬಿಡುತ್ತೇವೆ ಎಂದರು.