ಸುದ್ದಿಯಿಂದ ಪೋಷಕರಲ್ಲಿ ಭೀತಿ ಉಂಟಾಗಿದೆ.
Advertisement
ಆದರೆ, ಬೇರೆ ವಯೋಮಾನದ ಕೋವಿಡ್ ಸೋಂಕಿತರಿಗೆ ಹೋಲಿಸಿದರೆ, ಸೋಂಕಿತ ಮಕ್ಕಳಲ್ಲಿ ಗಂಭೀರತೆ ಕಂಡುಬಂದಿಲ್ಲ ಎಂದುಬಿಬಿಎಂಪಿ ಮಕ್ಕಳ ತಜ್ಞರ ಸಮಿತಿ ಸ್ಪಷ್ಟಪಡಿಸಿದೆ.
Related Articles
Advertisement
ಆಗಸ್ಟ್ ತಿಂಗಳಲ್ಲಿ 0-18 ವರ್ಷದ 511 ಮಕ್ಕಳಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.11.5ರಷ್ಟಿದೆ. ಏಪ್ರಿಲ್ ನಿಂದ ಜೂನ್‌ವರೆಗೆ 14 ಮಕ್ಕಳುಸಾವನ್ನಪ್ಪಿದ್ದು, ಜುಲೈ ಮತ್ತು ಆಗಸ್ಟ್‌ನಲ್ಲಿ ಯಾರೂ ಮೃತರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಶೀಘ್ರ 30 ಹಾಸಿಗೆಗಳ ಸಾಮರ್ಥ್ಯ ಆಸ್ಪತ್ರೆ: ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾ ಟ್ರಿಕ್ಸ್ ಪ್ರಕಟಿಸಿದ ಜಾಗತಿಕ ದತ್ತಾಂಶದಲ್ಲಿ ಒಟ್ಟುಕೋವಿಡ್ ಪ್ರಕರಣಗಳಲ್ಲಿ ಶೇ.14.3 ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಕೇವಲ ಶೇ.1.9 ಮಕ್ಕಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಲ್ಲಿ ಜಾಗತಿಕ ದತ್ತಾಂಶಕ್ಕಿಂತಲೂ ಕಡಿಮೆ ಸೋಂಕು ವರದಿ ಯಾಗುತ್ತಿದೆ. ಸೋಂಕಿತ ಮಕ್ಕಳ ಆರೈಕೆಗೆ
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ 7 ಆಸ್ಪತ್ರೆ ಗುರುತಿಸಲಾಗಿದೆ. ಜತೆಗೆ, ಬಿಬಿಎಂಪಿ ವತಿಯಿಂದ ಮಕ್ಕಳ ಆರೈಕೆಗೆ ಶೀಘ್ರ 30
ಹಾಸಿಗೆಗಳ ಸಾಮರ್ಥ್ಯ ಆಸ್ಪತ್ರೆ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದೆ. ಭಯಪಡುವ ಅಗತ್ಯವಿಲ್ಲ
ಕೋವಿಡ್ ಸೋಂಕು ಪತ್ತೆಯಾದ ಬಹುತೇಕ ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳು ಕಂಡುಬಂದಿದ್ದು, ತಮ್ಮಷ್ಟಕ್ಕೆ ತಾವೇ ಚೇತರಿಸಿಕೊಳ್ಳುತ್ತಾರೆ. ಹೀಗಾಗಿ, ನಗರದ ಜನರು ಹಾಗೂ ಪೋಷಕರು ಭಯಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಸೋಂಕು ಲಕ್ಷಣ ಕಂಡು ಬಂದಲ್ಲಿ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಬಿಬಿಎಂಪಿ ದೈಹಿಕ ಚಿಕಿತ್ಸಾ ಕೇಂದ್ರ(ಪಿಟಿಸಿ), ಪ್ರಾಥಮಿಕ ಆರೋಗ್ಯಕೇಂದ್ರ(ಪಿಎಚ್‌ಸಿ) ಅಥವಾ ಸಮುದಾಯ
ಆರೋಗ್ಯ ಕೇಂದ್ರಗಳಿಗೆ (ಸಿಎಚ್‌ಸಿಎ) ತೆರಳಿ ತಪಾಸಣೆ ಮಾಡಿಸಿಕೊಳ್ಳಬಹುದು. ಮೂರು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳುಕಡ್ಡಾಯವಾಗಿ ಕೋವಿಡ್‌ನಿಯಮಗಳನ್ನು ಪಾಲಿಸಬೇಕು ಎಂದು ಬಿಬಿಎಂಪಿಯ ಮಕ್ಕಳ ತಜ್ಞರ ಸಮಿತಿಯು ಸಲಹೆ ನೀಡಿದೆ.