Advertisement

ಯಾವುದೇ ಸೀಲ್ ಡೌನ್ -ಲಾಕ್ ಡೌನ್‌ ಮಾಡಿಲ್ಲ: ಬಿಬಿಎಂಪಿ ಆರೋಗ್ಯಾಧಿಕಾರಿ ಸ್ಪಷ್ಟನೆ

03:49 PM Dec 29, 2020 | Team Udayavani |

ಬೆಂಗಳೂರು: ನಗರದಲ್ಲಿ ಮೂರು ಜನ ಬ್ರಿಟನ್ ಪ್ರಯಾಣಿಕರಲ್ಲಿ ರೂಪಾಂತರ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಇವರು ವಾಸವಿದ್ದ ವಸತಿ ಸಮುಚ್ಛಯ ಪ್ರದೇಶಗಳ ಸುತ್ತ ಸ್ಯಾನಿಟೈಸರ್ ಕಾರ್ಯ ಪ್ರಾರಂಭಿಸಲಾಗಿದೆ.

Advertisement

ವಸಂತ ನಗರದ ತಾಯಿ ಮತ್ತು ಮಗು ಹಾಗೂ ಜೆಪಿ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ರೂಪಾಂತರ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇವರು ವಾಸವಿದ್ದ ಪ್ರದೇಶದ ನಿರ್ದಿಷ್ಟ ಜಾಗಕ್ಕೆ ಯಾರು ಪ್ರವೇಶ ಮಾಡದಂತೆ ತಡೆಯುವ ಉದ್ದೇಶದಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು ಅರ್ಪಾಟ್‌ಮೆಂಟ್‌ ನ ಬಾಗಿಲಿಗೆ ಕ್ವಾರಂಟೈನ್ ಎಂಬ ಫಲಕ ಹಾಕಲಾಗಿದೆ.

ಕೋವಿಡ್ ಸೋಂಕು ದೃಢಪಟ್ಟ 16 ಜನರ ಪ್ರಾಥಮಿಕ ಸಂಪರ್ಕದಲ್ಲಿ ಒಟ್ಟು 42 ಜನ ಇದ್ದು ಇವರ ಸೋಂಕು ಪರೀಕ್ಷೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೂ ಕಾಲಿಡ್ತು ಯುಕೆ ವೈರಸ್! ಹತ್ತು ದಿನವಾದರೂ ಪತ್ತೆಯಾಗಿಲ್ಲ 361 ಪ್ರಯಾಣಿಕರು!

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಅವರು, ನಗರದಲ್ಲಿ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದ ಅವರನ್ನು ಐಸೋಲೇಷನ್ ಮಾಡಲಾಗಿದ್ದು, ನಿರ್ದಿಷ್ಟ ಪ್ರದೇಶದಲ್ಲಿ ಕೋವಿಡ್ ಸೋಂಕು ದೃಢಪಟ್ಟ ವೇಳೆ ಅನುಸರಿಸುವ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಸೀಲ್‌ಡೌನ್ ಅಥವಾ ಲಾಕ್‌ಡೌನ್ ಮಾಡುವುದಕ್ಕೆ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ, ನಿರ್ದಿಷ್ಟ ಪ್ರದೇಶದಲ್ಲಿ ಅಗತ್ಯ ಸುರಕ್ಷತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next