Advertisement

4 ವರ್ಷದಲ್ಲಿ ಒಂದೂ ಶಾಲೆ ಮುಚ್ಚಿಲ್ಲ: ತನ್ವೀರ್‌ ಸೇಠ್

07:08 AM Nov 25, 2017 | Team Udayavani |

ವಿಧಾನಪರಿಷತ್ತು: “ಈ ವರ್ಷ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆ 3,125ಕ್ಕೆ ಏರಿಕೆಯಾಗಿರುವುದು
ಆತಂಕಕಾರಿ, ಇಷ್ಟಾದರೂ ಒಂದೂ ಶಾಲೆ ಮುಚ್ಚಿಲ್ಲ. ಒಂದು ಮಗುವಿದ್ದರೂ ಶಾಲೆ ನಡೆಸುವಂತೆ ಸೂಚಿಸಲಾಗಿದೆ’ ಎಂದು
ಸಚಿವ ತನ್ವಿರ್‌ ಸೇಠ್ ಸ್ಪಷ್ಟಪಡಿಸಿದ್ದಾರೆ. 

Advertisement

ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಬಿಜೆಪಿಯ ತಾರಾ ಅನುರಾಧ ಪ್ರಶ್ನೆಗೆ ಉತ್ತರಿಸಿದ ಅವರು, “ಕಳೆದ ವರ್ಷ 2,164 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತಲೂ ಕಡಿಮೆಯಿತ್ತು. ಈ ವರ್ಷ ಅದು 3,125ಕ್ಕೆ ಏರಿಕೆಯಾಗಿದೆ. ಮಕ್ಕಳ ನೋಂದಣಿ ಕಡಿಮೆಗೆ ಆರ್‌ಟಿಇ ಮತ್ತಿತರೆ ಅಂಶಗಳು ಕಾರಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ 21 ಶಿಫಾರಸುಗಳನ್ನು ಮಾಡಿದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು. 

ಜ್ಞಾನ ಆಯೋಗ ಮತ್ತಿತರೆ ಸಂಸ್ಥೆಗಳಿಂದಲೂ ಮಕ್ಕಳನ್ನು ಆಕರ್ಷಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ
ಪಡೆಯಲಾಗುತ್ತಿದೆ. ಕೆಲ ಸ್ವಯಂ ಸೇವಾ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಮಕ್ಕಳಲ್ಲಿ ಕಲಿಕಾ ಸಾಮರ್ಥಯ ಹೆಚ್ಚಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ನಾಲ್ಕು ವರ್ಷದಲ್ಲಿ ಬಾಗಲಕೋಟೆ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 2 ಶಾಲೆಗಳನ್ನು ನಿರ್ದಿಷ್ಟ ಕಾರಣಕ್ಕೆ ವಿಲೀನಗೊಳಿಸಿರುವುದು ಹೊರತುಪಡಿಸಿ ಮಕ್ಕಳ ಸಂಖ್ಯೆ ಕಡಿಮೆ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಶಾಲೆ ಮುಚ್ಚಿಲ್ಲ. ಬಾಡಿಗೆ ಕಟ್ಟಡದಲ್ಲಿದ್ದ ಶಾಲೆಗಳನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆಯೇ ಆರ್‌ಎಂಎಸ್‌ಎ ಅಡಿ ಹೊಸದಾಗಿ ನಿರ್ಮಾಣಗೊಂಡ ಶಾಲೆಗಳಿಗೆ ಸ್ಥಳಾಂತರಗೊಂಡಿರಬಹುದು ಎಂದು ಹೇಳಿದರು. 

ಇದರ ಜತೆಗೆ ರಾಜ್ಯದಲ್ಲಿ ಕೇಂದ್ರಿಕೃತ (ಕ್ಲಸ್ಟರ್‌ ಆಧಾರಿತ)ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ವಿವಿಧ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಸದನಕ್ಕೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next