Advertisement

ಬಂಡುಕೋರ ಸಂಸದ ಶರದ್‌ ಯಾದವ್‌ಗೆ ವೇತನ, ಭತ್ಯೆ ಇಲ್ಲ: ಸುಪ್ರೀಂ

12:22 PM Jun 07, 2018 | Team Udayavani |

ಹೊಸದಿಲ್ಲಿ : ರಾಜ್ಯಸಭಾ ಸದಸ್ಯತ್ವದಿಂದ ತನ್ನ ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇರುವಷ್ಟು ಕಾಲ ಮಾಜಿ ಜನತಾ ದಳ (ಯು) ಅಧ್ಯಕ್ಷ ಹಾಗೂ ಬಂಡುಕೋರ ಸಂಸದ ಶರದ್‌ ಯಾದವ್‌ ಅವರ ಮಾಸಿಕ ವೇತನ ಮತ್ತು ಭತ್ತೆಯನ್ನು ನಿಲ್ಲಿಸುವ ದಿಲ್ಲಿ ಹೈಕೋರ್ಟ್‌ ಆದೇಶವನ್ನು  ಸುಪ್ರೀಂ ಕೋರ್ಟ್‌ ಮಾರ್ಪಡಿಸಿದೆ.

Advertisement

ಕಳೆದ ಡಿಸೆಂಬರ್‌ 15ರಂದು ದಿಲ್ಲಿ ಹೈಕೋರ್ಟ್‌ ಆದೇಶಿಸಿರುವ ಪ್ರಕಾರ ಶರದ್‌ ಯಾದವ್‌ ಅವರು ತಮ್ಮ ಅಧಿಕೃತ ಬಂಗಲೆಯನ್ನು ಉಳಿಸಿಕೊಳ್ಳಬಹುದು, ಆದರೆ ಮಾಸಿಕ ವೇತನ, ಭತ್ಯೆ ಮತ್ತು ಇತರ ಸೌಕರ್ಯಗಳನ್ನು ಪಡೆಯುವಂತಿಲ್ಲ ಎಂದು ರಜಾಕಾಲದ ನ್ಯಾಯಮೂರ್ತಿಗಳಾದ ಎ ಕೆ ಗೋಯಲ್‌ ಮತ್ತು ಅಶೋಕ್‌ ಭೂಷಣ್‌ ತಮ್ಮ ಆದೇಶದಲ್ಲಿ ಹೇಳಿದರು.

ಶರದ್‌ ಯಾದವ್‌ ಅವರು ದಿಲ್ಲಿಯಲ್ಲಿನ ತಮ್ಮ ಸರಕಾರಿ ಬಂಗಲೆಯನ್ನು ಉಳಿಸಿಕೊಳ್ಳಬಹುದು; ಮಾಸಿಕ ವೇತನ, ಭತ್ಯೆ ಮತ್ತು ಇತರ ಸೌಕರ್ಯ ಪಡೆಯುವುದನ್ನು ಮುಂದುವರಿಸಬಹುದು ಎಂದು ದಿಲ್ಲಿ ಹೈಕೋರ್ಟ್‌ ನೀಡಿದ್ದ ಮಧ್ಯಾವಧಿ ಆದೇಶವನ್ನು ಜೆಡಿಯು ರಾಜ್ಯಸಭಾ ಸಂಸದ ರಾಮಚಂದ್ರ ಪ್ರಸಾದ್‌ ಸಿಂಗ್‌ ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.  

ದಿಲ್ಲಿ ಹೈಕೋರ್ಟ್‌ ಶರದ್‌ ಯಾದವ್‌ ಅವರ ರಾಜ್ಯಸಭಾ ಸದಸ್ಯತ್ವದ ಅನರ್ಹತೆಗೆ ತಡೆ ನೀಡಲು ನಿರಾಕರಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next