Advertisement

ಏಷ್ಯಾ ಮಿಶ್ರ ಬ್ಯಾಡ್ಮಿಂಟನ್‌: ಹಿಂದೆ ಸರಿದ ಸೈನಾ, ಸಿಂಧು

10:37 AM Feb 23, 2017 | Team Udayavani |

ನವದೆಹಲಿ: ವಿಯೆಟ್ನಾಮ್‌ನ ಹೊಚಿಮಿನ್‌ನಲ್ಲಿ ಶುರುವಾಗಿರುವ ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಇಬ್ಬರು ತಾರೆಯರು ಭಾಗವಹಿಸುವುದಿಲ್ಲವೆನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. 

Advertisement

ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌, ಪ್ರಸ್ತುತ ವಿಶ್ವ ನಂ.5ನೇ ಶ್ರೇಯಾಂಕಿತೆ ಪಿ.ವಿ.ಸಿಂಧು ಇಬ್ಬರೂ ಕೂಟದಿಂದ ಹಿಂದೆ ಸರಿದಿದ್ದಾರೆ. ಬೇರೆ ಬೇರೆ ಕೂಟಗಳಲ್ಲಿ ತಾವು ಒತ್ತಡದ ವೇಳಾಪಟ್ಟಿ ಹೊಂದಿರುವುದರಿಂದ ಹಿಂದೆ ಸರಿಯುತ್ತಿದ್ದೇವೆಂದು ಇಬ್ಬರೂ ತಿಳಿಸಿದ್ದಾರೆ. ಇದು ತಂಡದ ನಿರೀಕ್ಷೆಗಳಿಗೆ ಹೊಡೆತ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next