Advertisement
ಅಜ್ಜಾವರ ಗ್ರಾಮದ ಕರ್ಲಪ್ಪಾಡಿಯ ಪಡ್ಡಂಬೈಲು ಪ್ರದೇಶದ ನಾಲ್ಕು ಮನೆಗಳಿಗೆ ರಸ್ತೆ ನಿರ್ಮಾಣ ಆಗದೆ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸುಮಾರು 200ರಿಂದ 250 ಮೀಟರ್ ದೂರ ರಸ್ತೆಯಿಲ್ಲದೆ ಯಾವುದೇ ವಾಹನಗಳು ಓಡಾಡುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ.
ಅಜ್ಜಾವರ ಪಂಚಾಯತ್ ರಸ್ತೆಯಿಂದ ಪಡ್ಡಂಬೈಲಿನ ನಾಲ್ಕು ಮನೆಗಳ ಕಡೆಗೆ ಹೋಗಲು ಯಾವುದೇ ರಸ್ತೆ ವ್ಯವಸ್ಥೆಗಳಿಲ್ಲದೆ ಹಲವು ದಶಕಗಳು ಕಳೆದಿವೆ. ಇಬ್ಬರ ಜಾಗದ ನಡುವೆ ಕಾಲು ದಾರಿಯಿದ್ದು, ರಸ್ತೆಯ ಕನಸು ಮರೀಚಿಕೆಯಾಗಿಯೇ ಉಳಿದಿದೆ. ರಸ್ತೆ ನಿರ್ಮಾಣವಾಗದೆ, ವಾಹನಗಳು ಕೂಡ ಸಂಚರಿಸುವುದಿಲ್ಲ. ತಮ್ಮ ಸ್ವಂತ ವಾಹನಗಳನ್ನು ಇತರರ ಮನೆಯಲ್ಲಿ ಇಟ್ಟು ಹೋಗಬೇಕಾದ ಪರಿಸ್ಥಿತಿಯಿದೆ. ಕಾಲು ದಾರಿಯಲ್ಲೇ ತಮ್ಮ ಮನೆಗೆ ತೆರಳುತ್ತಿ¨ªಾರೆ. ಈ ಭಾಗದಲ್ಲಿ ಅಸೌಖ್ಯದಿಂದ ಬಳಲುತ್ತಿರುವವರನ್ನು ಕೊಂಡೊಯ್ಯುವುದೇ ಒಂದು ಸವಾಲು. ಒಂದೆರಡು ಜನ ಸಹಾಯಕ್ಕಿಲ್ಲದೆ ಎತ್ತಿಕೊಂಡು ಹೋಗಲೂ ಸಾಧ್ಯ ವಿಲ್ಲ. ಅನಾರೋಗ್ಯವಾದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಹಲವು ವರ್ಷ ಗಳಿಂದ ಸಂಬಂಧಪಟ್ಟ ಅಧಿಕಾರಿ ಗಳಿಗೆ ಹೇಳಿದ್ದರೂ, ಯಾವುದೇ ಪರಿಹಾರವಾಗಿಲ್ಲ. ದಿನನಿತ್ಯ ಕಾರ್ಯ ಗಳಿಗೆ ಕಾಲ್ನಡಿಯಲ್ಲೇ ಓಡಾಡ ಬೇಕಿದೆ. ನೆಮ್ಮದಿಯೇ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಳಲು. ನೀರಿಗೂ ಕೊರತೆ
ಬೇಸಗೆಯ ಬಿಸಿ ಈ ಭಾಗದ ಜನರಿಗೆ ಸ್ವಲ್ಪ ಜಾಸ್ತಿಯೇ ತಟ್ಟಿದೆ. ಬಾವಿಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದೂ, ಬತ್ತಿ ಹೋಗಿದೆ. ತೋಟಗಳಿಗೆ ನೀರಿಲ್ಲದೆ, ಅಡಿಕೆ ಮರಗಳು ಒಣಗಿ ನಾಶದ ಅಂಚಿನಲ್ಲಿವೆ. ರಸ್ತೆಯಿಲ್ಲದೆ, ಕೃಷಿಗೆ ಉಪಯೋಗಿಸಲು ಕೊಳವೆ ಬಾವಿ ಕೊರೆಯಲು ಕೂಡ ಸಾಧ್ಯವಾಗುತ್ತಿಲ್ಲ. ಕುಡಿಯಲು ಪಂಚಾಯತ್ ನಿಂದ ನಳ್ಳಿ ನೀರು ಬರುತ್ತಿದೆ. ವಿದ್ಯುತ್ ಕೈಕೊಟ್ಟರೆ ಅದು ಕೂಡ ಇಲ್ಲ. ಒಟ್ಟಾರೆ ಜೀವನ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ.
Related Articles
Advertisement
ಶೌಚಾಲಯ ನಿರ್ಮಾಣರಸ್ತೆಯಿಲ್ಲದ ಕಾರಣ ಈ ಭಾಗದಲ್ಲಿ ಶೌಚಾಲಯ ಕೂಡ ಕಟ್ಟಿಸಿರಲಿಲ್ಲ. ಅಷ್ಟು ದೂರದಿಂದ ಕಲ್ಲು ಹೊತ್ತುಕೊಂಡು ಬರಲು ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಜನರು ಸಿಗುವುದು ಕೂಡ ಇಲ್ಲ ಎನ್ನುವುದು ಇಲ್ಲಿನ ಜನರ ಅಳಲು. ಆದರೆ ಗ್ರಾ.ಪಂ. ಹಾಗೂ ಸ್ಥಳೀಯರಾದ ಮಿಥುನ್ ಕರ್ಲಪ್ಪಾಡಿ ಸ್ವತ್ಛ ಗ್ರಾಮದಡಿ ಜನರ ಮನವೊಲಿಸಿ ಶೌಚಾಲಯ ಕಟ್ಟಿಸಿದ್ದಾರೆ. ಕೆಂಪು ಕಲ್ಲಿನ ಬದಲು ಹೋಲೋಬ್ಲಾಕ್ ಹಾಗೂ ಹೊಯಿಗೆ ತಂದು ಶೌಚಾಲಯ ನಿರ್ಮಿಸಿದ್ದಾರೆ. ತಹಶಿಲ್ದಾರರಿಗೆ ಮನವಿ
ಪಡ್ಡಂಬೈಲು ಭಾಗದಲ್ಲಿ ರಸ್ತೆ ನಿರ್ಮಾಣವಾಗಬೇಕೆಂದು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಗ್ರಾ.ಪಂ. ಕೂಡ ಮನವಿ ಸಲ್ಲಿಸಲಾಗಿತ್ತು. ಇದೀಗ ತಹಶಿಲ್ದಾರರಿಗೆ ಮತ್ತೂಮ್ಮೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭ ಎಸ್. ಸಂಶುದ್ದೀನ್, ಸಿದ್ದಿಕ್ ಕೊಕ್ಕೊ, ಮಲೆನಾಡ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ರಿಯಾಝ್ ಕಟ್ಟೆಕಾರ್, ಪವನ್, ಮಿಥುನ್, ಸದಾನಂದ, ಮತ್ತಿತರರು ಉಪಸ್ಥಿತರಿದ್ದರು. ಮಾಹಿತಿ ಇಲ್ಲ
ಮನೆಗಳಿಗೆ ರಸ್ತೆ ಇಲ್ಲದ ಕುರಿತು ಮಾಹಿತಿಯಿಲ್ಲ. ನಮಗೆ ಯಾವುದೇ ಅರ್ಜಿ ಬಂದಿಲ್ಲ. ಮನವಿ ಬಂದರೆ ಗಮನ ಹರಿಸಲಾಗುವುದು.
- ಜಯಮಾಲಾ ಪಿಡಿಒ ಅಜ್ಜಾವರ ಗ್ರಾ.ಪಂ. ಶೀಘ್ರ ನಿರ್ಮಾಣ ವಾಗಲಿ
ಚಿಕ್ಕಂದಿನಿಂದಲೂ ಇಲ್ಲಿನ ಮನೆಗಳಿಗೆ ರಸ್ತೆ ಇಲ್ಲ. ನಮ್ಮ ಸ್ವಂತ ಮನೆಗಳಿಗೆ ವಾಹನಗಳನ್ನು ತಗೆದುಕೊಂಡು ಹೋಗಲಾಗದೆ ಹತ್ತಿರದ ಮನೆಯಲ್ಲಿ ಬಿಟ್ಟು ಹೋಗುತ್ತೇವೆ. ದಿನನಿತ್ಯದ ಕೆಲಸಗಳಿಗೆ ಕಾಲ್ನಡಿಗೆಯಲ್ಲೇ ಓಡಾಡುವ ಪರಿಸ್ಥಿತಿಯಿದೆ. ಶೀಘ್ರದಲ್ಲಿ ರಸ್ತೆ ನಿರ್ಮಾಣ ಆಗಬೇಕು.
- ಸದಾನಂದ ಕರ್ಲಪ್ಪಾಡಿ, ಸ್ಥಳೀಯರು ಶಿವಪ್ರಸಾದ್ ಮಣಿಯೂರು