ಲಕ್ನೋ : ಉತ್ತರ ಪ್ರದೇಶದಲ್ಲಿ ಗಲಭೆಗಳಿಗೆ ಸ್ಥಳವಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ರಂಜಾನ್ ಮಾಸದ ವೇಳೆ ರಾಮನವಮಿ ಆಚರಣೆಗಳು ಯಾವುದೇ ಹಿಂಸಾಚಾರದ ಘಟನೆಗಳಿಲ್ಲದೆ ನಡೆದಿವೆ ಎಂದು ಒತ್ತಿಹೇಳಿದ ಅವರು, ಯಾವುದೇ ವಾಗ್ವಾದ ಅಥವಾ “ನೀನು -ನೀನು, ನಾನು -ನಾನು(ತು-ತು, ಮೈ-ಮೈ)” ಕೂಡ ಇರಲಿಲ್ಲ ಎಂದಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ರಾಮನವಮಿ ಸಂದರ್ಭದ ಪರಿಸ್ಥಿತಿಯು ಯುಪಿಯಲ್ಲಿ “ಅಭಿವೃದ್ಧಿಯ ಹೊಸ ಚಿಂತನೆ” ಯನ್ನು ಪ್ರತಿಬಿಂಬಿಸುತ್ತದೆ ಎಂದು ಆದಿತ್ಯನಾಥ್ ಹೇಳಿದರು.
25 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ 800 ಸ್ಥಳಗಳಲ್ಲಿ ರಾಮನವಮಿ ಸಂಬಂಧಿತ ಮೆರವಣಿಗೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಇದು ರಂಜಾನ್ ತಿಂಗಳು ಮತ್ತು “ರೋಜಾ-ಇಫ್ತಾರ್” ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. “ಎಲ್ಲಿಯೂ ಯಾವುದೇ ವಾಗ್ವಾದ,ಗಲಭೆ ಬಿಡಿ ರಾಜ್ಯದಲ್ಲಿ ಅರಾಜಕತೆ, ಗೂಢಾಚಾರ ಮತ್ತು ವದಂತಿಗಳಿಗೆ ಅವಕಾಶವಿಲ್ಲ ಎಂದು ಅವರು ಹೇಳಿದರು.
ಯುಪಿಯಲ್ಲಿ ಈ ಹಿಂದೆ ಕೋಮು ಘರ್ಷಣೆಗಳು ಸಾಮಾನ್ಯ ಲಕ್ಷಣವಾಗಿದ್ದರೆ, 2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಯಾವುದೇ ಗಲಭೆ ನಡೆದಿಲ್ಲ ಎಂದು ಆದಿತ್ಯನಾಥ್ ಪದೇ ಪದೇ ಹೇಳಿಕೊಂಡಿದ್ದಾರೆ.