Advertisement

ಶೇ.97 ನೋಟು ವಾಪಸ್‌ ಲೆಕ್ಕ ಸರಿ ಇಲ್ಲ: ಆರ್‌ಬಿಐ

03:50 AM Jan 06, 2017 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ನ.8ರಂದು ನಿಷೇಧಿಸಿದ್ದ 500, 1000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ.97ರಷ್ಟು ಕರೆನ್ಸಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಆ ಅಂದಾಜು ಸರಿ ಇಲ್ಲದಿರಬಹುದು ಎಂದು ಹೇಳಿದೆ. ಶೀಘ್ರ ನಿಖರ ಮಾಹಿತಿ ಬಿಡುಗಡೆ ಮಾಡುವುದಾಗಿ ಹೇಳಿದೆ.

Advertisement

“ನೋಟುಗಳ ಕುರಿತಂತೆ ಕೆಲವೊಂದು ವರ್ಗಗಳಲ್ಲಿ ಬಗೆಬಗೆಯ ಅಂದಾಜುಗಳು ಇವೆ. ಆದರೆ, ಇಲ್ಲಿವರೆಗೂ ನಾವು ಬಿಡುಗಡೆ ಮಾಡಿರುವ ಲೆಕ್ಕಗಳು ದೇಶಾದ್ಯಂತ ಇರುವ ಕರೆನ್ಸಿ ಚೆಸ್ಟ್‌ಗಳಲ್ಲಿ ದಾಖಲಾದ ಮಾಹಿತಿಗಳನ್ನು ಆಧರಿಸಿದ್ದಾಗಿವೆ. ಈಗ ಅಪನಗದೀಕರಣ ಪ್ರಕ್ರಿಯೆ ಮುಗಿದಿದೆ. ಭೌತಿಕ ನಗದು ಬಾಕಿಯನ್ನು ತುಲನೆ ಮಾಡಿ, ಲೆಕ್ಕದ ದೋಷ/ಸಂಭಾವ್ಯ ಎರಡು ಬಾರಿ ಎಣಿಕೆಯನ್ನು ಹೋಗಲಾಡಿಸಬೇಕಾಗಿದೆ. ಈ ಸಂಬಂಧ ಪ್ರಕ್ರಿಯೆ ಆರಂಭಿಸಲಾಗಿದೆ. ಅದು ಮುಗಿಯುವವರೆಗೂ ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದ ನೋಟಿನ ಲೆಕ್ಕಾಚಾರ ನಿಖರವಾಗಿರುವುದಿಲ್ಲ’ ಎಂದು ಆರ್‌ಬಿಐ ತಿಳಿಸಿದೆ. ಈ ನಡುವೆ, ಮರಳಿದ ನೋಟು ಮೌಲ್ಯದ ಬಗ್ಗೆ “ನನಗೇನೂ ಗೊತ್ತಿಲ್ಲ’ ಎಂದು ವಿತ್ತ ಸಚಿವ ಜೇಟಿÉ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next