Advertisement
ಈ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ ಈ ರೂಪಾಂತರಿ ಪತ್ತೆಯಾಗಿದ್ದು, ಈಗ 140ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿದೆ. ಅಮೆರಿಕದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.96ರಷ್ಟು ಡೆಲ್ಟಾ ರೂಪಾಂತರಿಗೆ ಸಂಬಂಧಿಸಿದ್ದಾಗಿದ್ದರೆ, ಯುಕೆ, ರಷ್ಯಾ, ಇಂಡೋನೇಷ್ಯಾ, ಭಾರತದಲ್ಲಿ ಶೇ.100ರಷ್ಟು ಪ್ರಕರಣಗಳು ಇದೇ ರೂಪಾಂತರಿಯದ್ದು. ಇನ್ನು, ಬ್ರೆಜಿಲ್‌ನಲ್ಲಿ ಗಾಮಾ ರೂಪಾಂತರಿ ಸದ್ದು ಮಾಡುತ್ತಿದ್ದು, ಶೇ.75ರಷ್ಟು ಮಂದಿಗೆ ಈ ಸೋಂಕು ದೃಢಪಟ್ಟಿದೆ ಎಂದೂ ಸಂಸ್ಥೆ ತಿಳಿಸಿದೆ.
Related Articles
ಇನ್ನು, ಪಂಜಾಬ್‌ನಲ್ಲಿ ಸೋಮವಾರದಿಂದ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಮತ್ತು ಆರ್‌ಟಿ ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಜತೆಗೆ, ಹಿಮಾಚಲ ಪ್ರದೇಶ ಮತ್ತು ಜಮ್ಮುವಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು ಎಂದೂ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಹೇಳಿದ್ದಾರೆ.
Advertisement