Advertisement

ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ: ರೇಣುಕಾಚಾರ್ಯ

06:02 PM Sep 16, 2019 | Sriram |

ದಾವಣಗೆರೆ: ಬಿಜೆಪಿಯಲ್ಲಿ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾ ಶಾಸಕರು,ಸಚಿವರು ಸಂಘಟನೆ ಮಾಡಿ ಯಡಿಯೂರಪ್ಪ ನವರ ಪಕ್ಷದ ಕೈ ಬಲಗೊಳಿಸುತ್ತೇವೆ.ರಾಜ್ಯಾಧ್ಯಕ್ಷರ ಹಾಗೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ಕಾರ ನಡೆಯಲಿದೆ.

ಮಾಜಿ‌ ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಗ್ಗೆ ‌ಮಾತನಾಡಿದ್ದು ಸರಿಯಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲಾ ನೆರವು ನೀಡುತ್ತದೆ.ಕಾಂಗ್ರೆಸ್ ಪಕ್ಷದ ಕೇಂದ್ರ ಹಾಗೂ ರಾಜ್ಯದ ನಾಯಕರು ನಿರ್ಜೀವ ವಾಗಿದ್ದಾರೆ.ಕಾಂಗ್ರೆಸ್ ‌ಪಕ್ಷ ಮುಳುಗುತ್ತಿರುವ ಹಡಗು.ಸಿದ್ದರಾಮಯ್ಯನವರು ನೀವು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದರು.

ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ ಎಂಪಿ
ನಾವು ಮೂರು ತಿಂಗಳು ,ಒಂದು ವರ್ಷ,ಐದು ವರ್ಷ ಇರ್ತಿವೋ ಗೊತ್ತಿಲ್ಲ.ನಾವೇಲ್ಲರು ಮಾಜಿ ಆಗ್ತಿವಿ.ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ 60 ವರ್ಷ ಕೆಲಸ ಮಾಡುತ್ತಲೇ ಇರುತ್ತಾರೆ. ಚುನಾವಣೆ ಯಾವ ವರ್ಷದಲ್ಲಿ ಬರುತ್ತೆ ಅನ್ನೋದೆ ಗೊತ್ತಿಲ್ಲ.ಅಧಿಕಾರಿಗಳು ಮಾತ್ರ ಯಾವಾಗಲೂ ಕೆಲಸ ಮಾಡಬೇಕು.ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next