ಮುಂಬಯಿ, ಮೇ 8: ಲಾಕ್ ಡೌನ್ ಮಧ್ಯೆ ತಮ್ಮ ತಾಯ್ನಾಡಿಗೆ ಮರಳಲು ಬಯಸುತ್ತಿರುವ ವಲಸೆ ಕಾರ್ಮಿಕರು ಹಾಗೂ ಇತರ ಸಿಕ್ಕಿಕೊಂಡಿರುವ ವ್ಯಕ್ತಿಗಳು ವೈಯಕ್ತಿಕ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಸರಕಾರವು ಗುರುವಾರ ಆದೇಶ ಹೊರಡಿಸಿದೆ.
ಪ್ರಯಾಣದ ಪ್ರಾರಂಭದ ಸಮಯದಲ್ಲಿ ಪರೀಕ್ಷಿಸಲ್ಪಟ್ಟ ಪ್ರಯಾಣಿಕರ ಪಟ್ಟಿ ಮತ್ತು ಶೀತಜ್ವರದಂತಹ ಯಾವುದೇ ಅನಾರೋಗ್ಯವನ್ನು ಪ್ರದ ರ್ಶಿಸದಿರುವ ಬಗ್ಗೆ ವೈದ್ಯಕೀಯ ಉಸ್ತುವಾರಿಯ ಪ್ರಮಾಣೀಕರಣವು ಸಾಕಾಗುತ್ತದೆ (ವ್ಯಕ್ತಿಗಳು ಪ್ರಯಾ ಣಿಸಲು) ಎಂದು ಸರಕಾರ ತಿಳಿಸಿದೆ.
ತಮ್ಮ ತವರು ಸ್ಥಳಗಳಿಗೆ ಪ್ರಯಾಣಿಸಲು ಇಚ್ಛಿಸುವ ವಲಸಿಗರು ಅಥವಾ ಸಿಕ್ಕಿಬಿದ್ದ ವ್ಯಕ್ತಿಗಳನ್ನು ತಮ್ಮ ಪ್ರಯಾಣದ ಪ್ರಾರಂಭದಲ್ಲಿ ಡಿಜಿಟಲ್ ಥರ್ಮಾಮೀಟರ್ ಮತ್ತು ರೋಗಲಕ್ಷಣದ ಪರೀಕ್ಷೆಯ ಮೂಲಕ ಉಚಿತವಾಗಿ ಪರೀಕ್ಷಿಸಲಾಗುತ್ತದೆ ಎಂದು ಸರಕಾರ ಹೇಳಿದೆ. ಇದನ್ನು ಸರಕಾರಿ ಅಥವಾ ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಕ ಅಥವಾ ಮಹಾನಗರ ಪಾಲಿಕೆಯ ನೋಂದಾಯಿತ ವೈದ್ಯಕೀಯ ವೈದ್ಯರನ್ನು ನೇಮಿಸಿಕೊಳ್ಳುವ ಮೂಲಕ ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲ್ಲಾ ಪ್ರಯಾಣಿಕರನ್ನು ಪರೀಕ್ಷಿಸಲಾಗಿದೆ ಮತ್ತು ಅವರು ಶೀತಜ್ವರದಂತಹ ಯಾವುದೇ ಅನಾರೋಗ್ಯದ ಲಕ್ಷಣಗಳನ್ನು ಪ್ರದರ್ಶಿಸುತ್ತಿಲ್ಲ ಎಂದು ಸೂಚಿಸುವ ಪಟ್ಟಿಯನ್ನು ವೈದ್ಯಕೀಯ ಉಸ್ತುವಾರಿ ನೀಡಲಾಗುವುದು. ವೈಯಕ್ತಿಕ ಪ್ರಮಾಣಪತ್ರಗಳ ಅಗತ್ಯವಿಲ್ಲ ಮತ್ತು ಪ್ರಯಾಣಿಕರ ಪ್ರಮಾಣಪತ್ರವು ಸಾಕಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಅಜೋಯ್ ಮೆಹ್ತಾ ಅವರು ಸಹಿ ಮಾಡಿದ ಆದೇಶದಲ್ಲಿ ಉಲ್ಲೇಖೀಸಲಾಗಿದೆ.
ಹೆಚ್ಚಿನ ಶುಲ್ಕ : ಖಾಸಗಿ ವೈದ್ಯರು ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲು ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆಂದು ವಲಸೆ ಕಾರ್ಮಿಕರಿಂದ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರದಿಂದ ಈ ಆದೇಶ ಬಂದಿದೆ ಎನ್ನಲಾಗಿದೆ.