Advertisement

ರಾಮನಗರ ಜಿಲ್ಲೆ ಮರು ನಾಮಕರಣ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

09:58 AM Jan 06, 2020 | mahesh |

ಬೆಂಗಳೂರು: ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದ್ದಾರೆ. “ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರಕಾರದ ಮುಂದೆ ಆ ತರಹದ ಯಾವುದೇ ಯೋಚನೆ ಇಲ್ಲ.

Advertisement

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಯಾವುದೇ ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿದ್ದಾರೆ. ಬಹುಶ: ಆ ಎರಡು ಪಕ್ಷಗಳ ನಾಯಕರುಗಳು ಸುದ್ದಿಯಲ್ಲಿರಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ಮುಂದೆ ಯಾವುದೇ ಆ ತರಹದ ವಿಷಯವಾಗಲೀ, ಅಥವಾ ಕಾರ್ಯಸೂಚಿಯಾಗಲಿ ಇಲ್ಲವೆಂದು ಸ್ಷಷ್ಠಪಡಿಸುತ್ತೇನೆ.

ಶ್ರೀ ರಾಮನ ಬಗ್ಗೆ ನಮಗೆ ಇರುವ ಭಕ್ತಿಯಾಗಲೀ ಅಥವಾ ಅಭಿಮಾನವಾಗಲೀ ಯಾರು ಪ್ರಶ್ನಿಸಲು ಸಾಧ್ಯವಿಲ್ಲ. ನನಗೆ ಆಶ್ಚರ್ಯವೇನೆಂದರೆ ಕಾಂಗ್ರೆಸ್‍ನವರಿಗಾಗಲೀ ಜೆಡಿಎಸ್ ನವರಿಗಾಗಲೀ ರಾಮನ ಬಗ್ಗೆ ಭಕ್ತಿ ಹುಟ್ಟಿದ್ದು. ಅವರ ಭಕ್ತಿ ನಿಜವಾಗಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲದ ವಿಷಯದ ಬಗ್ಗೆ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.” ಎಂದು ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next