Advertisement
ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ಐದು ಹೋಬಳಿಗಳು ಇವೆ. 1,43,000 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆಗೆ ಯೋಗ್ಯ ಪ್ರದೇಶವಾಗಿದೆ. 1,19,000 ಹೆಕ್ಟೇರ್ ಪ್ರದೇಶ ಖುಷ್ಕಿ (ಮಳೆಯಾದಾರಿತ), 1,435 ಹೆಕ್ಟೇರ್ ಪ್ರದೇಶ ನೀರಾವರಿ ಕೃಷಿ ಪ್ರದೇಶ ಹೊಂದಿದೆ.
Related Articles
Advertisement
ಈ ವರ್ಷ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಬೆಳೆಯಬಹುದಾದ ಪ್ರದೇಶದ ಗುರಿ ಹಾಕಿಕೊಂಡಿದ್ದರು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 1.20 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಿರೀಕ್ಷೆಯಿಟ್ಟುಕೊಂಡಿತ್ತು. 89,300 ಹೆಕ್ಟೇರ್ ತೊಗರಿ, 13,000 ಹೆಕ್ಟೇರ್ ಹೆಸರು, 7,000 ಹೆಕ್ಟೇರ್ ಉದ್ದು, 3,000 ಹೆಕ್ಟೇರ್ ಹತ್ತಿ, 1,900 ಹೆಕ್ಟೇರ್ ಸಜ್ಜೆ, 85 ಹೆಕ್ಟೇರ್ ಭತ್ತ, 1,500 ಹೆಕ್ಟೇರ್ ಸೂರ್ಯಕಾಂತಿ, 15 ಹೆಕ್ಟೇರ್ ಔಡಲ ಬೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು. 1,800 ಹೆಕ್ಟೇರ್‌ನಷ್ಟು ಸೋಯಾಬೀನ್, 1,000 ಹೆಕ್ಟೇರ್ ಎಳ್ಳು ಬಿತ್ತನೆಯ ಗುರಿ ಹೊಂದಲಾಗಿತ್ತು.
54,380 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆ: ತಾಲೂಕಿನಲ್ಲಿ ಒಟ್ಟು ಐದು ಹೋಬಳಿ ವ್ಯಾಪ್ತಿಯಲ್ಲಿ 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು. ಆದರೆ ವಿಪರ್ಯಾಸ ಎನ್ನುವಂತೆ ಜೂನ್ ತಿಂಗಳ ಅಂತ್ಯದವರೆಗೆ ಕೇವಲ 54,380 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಹೀಗಾಗಿ ಪ್ರತಿ ವರ್ಷವೂ ರೈತರು ಮಳೆಯನ್ನೆ ಅವಲಂಬಿಸಿದ್ದು ಆಳುವ ಸರ್ಕಾರಗಳು ರೈತರ ನೆರವಿಗೆ ಬರಬೇಕಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನಾವು ಹಾಕಿಕೊಂಡಿರುವ 1.20 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ ಜುಲೈ 3ರ ತನಕ ಅಂದಾಜು 54,380 ಸಾವಿರ ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ.•ಎಸ್.ಎಚ್. ಗಡಗಿಮನಿ, ಸಹಾಯಕ ಕೃಷಿ ನಿರ್ದೇಶಕ
ಕಳೆದ ನಾಲ್ಕೈದು ವರ್ಷಗಳ ಹಿಂದೆ ಜೂನ್ ಮುಗಿಯುವ ಹಂತದಲ್ಲಿ ಹೆಚ್ಚಾಗಿ ಮಳೆಯಾಗುತ್ತಿತ್ತು. ಹೀಗಾಗಿ ಜೂನ್ ಮೊದಲ ವಾರದಲ್ಲಿಯೇ ಬಿತ್ತನೆಗೆ ತಯಾರಿ ಮಾಡಿಕೊಂಡು ಬಿತ್ತನೆ ಶುರು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇದೀಗ ಬಿತ್ತನೆಗಿಂತ ಮುಂಚೆಯೆ ಮಳೆರಾಯನಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.•ಶರಣು ಡೋಣಗಾಂವ, ಗ್ರಾಮಸ್ಥ
•ಎಂ.ಡಿ. ಮಶಾಖ