Advertisement
ಸಚಿವ ನಾರಾಯಣಗೌಡರು ಸ್ಥಳಕ್ಕಾಗಮಿಸುವುದನ್ನೇ ಕಾಯುತ್ತಿದ್ದ ಶಾಸಕರು ಮತ್ತು ಸ್ಥಳೀಯರು, ಸಚಿವರು ಬಂದು ವಿಷಯ ಪ್ರಸ್ತಾಪಿಸಿದ ಕೂಡಲೇ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಜನವಸತಿ ಪ್ರದೇಶವಾಗಿದೆ. ಇಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ಬಿಡುವುದಿಲ್ಲವೆಂದು ವಿರೋಧ ವ್ಯಕ್ತಪಡಿಸಿದರು. ತಾಳ್ಮೆ ಕಳೆದುಕೊಂಡ ಸಚಿವ ನಾರಾಯಣಗೌಡ, ನಾನಿಲ್ಲಿಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದೇನೆ. ನನ್ನ ನಿರ್ಧಾರವನ್ನು ಪ್ರಶ್ನೆ ಮಾಡಲು ನೀವ್ಯಾರು? ಮರ್ಯಾದೆ ಕೊಡುವುದನ್ನು ಕಲಿಯಿರಿ. ಸರ್ಕಾರದ ಕೆಲಸ ಮಾಡಲು ಬಂದಿದ್ದೇನೆ. ನಾನೇನು ಕೊರೊನಾ ಸೋಂಕಿತರನ್ನು ಕರೆತಂದಿಲ್ಲ. ದೊಣ್ಣೆ ಹೊತ್ತು ನಿಂತಿದ್ದೀರಾ? ಯಾವನೇನ್ ಮಾಡ್ತಾನೆ ನಾನೂ ನೋಡೇ ಬಿಡ್ತೀನಿ, ತಮಟೆ ಹೊಡೆಸಿ ಜನಸೇರಿಸಿ ಪ್ರತಿಭಟನೆ ಮಾಡುತ್ತಿದ್ದೀರ ಎಂದು ಏರು ಧ್ವನಿಯಲ್ಲಿ ಕೂಗಾಡಿದರು.
ಎಂದು ಹೇಳಿದರು. ಕ್ವಾರಂಟೈನ್‌ಗೆ ಬಿಡುವುದಿಲ್ಲ: ನಾರಾಯಣಗೌಡರು ಬಾಂಬೆಯಿಂದ 2 ಸಾವಿರ ಜನರನ್ನು ಕರೆತಂದು ಇಲ್ಲಿ ಕ್ವಾರಂಟೈನ್ ಮಾಡಲು ಉದ್ದೇಶಿಸಿದ್ದಾರೆ. ಹೊರ ರಾಜ್ಯಗಳಿಂದ ಬರುವವರನ್ನು ನನ್ನ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ. ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸುಮ್ಮನಿದ್ದೇವೆ. ಆದರೆ ಯಾವ ಕಾರಣಕ್ಕೂ ಇಲ್ಲಿ ಸ್ಥಳಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು.