Advertisement

ಹೊಸ ವರ್ಷಾಚರಣೆ, ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶವಿಲ್ಲ: ಗೃಹ ಸಚಿವ ಬೊಮ್ಮಾಯಿ

01:16 PM Dec 27, 2020 | keerthan |

ಬೆಂಗಳೂರು: ಕೋವಿಡ್ ರೂಪಾಂತರ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಈ ಬಗ್ಗೆ ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡಸಂಖ್ಯೆಯಲ್ಲಿ ಜನಸೇರಿ ಕೋವಿಡ್ ಹರಡಲು ಅವಕಾಶ ನೀಡಬಾರದು, ಪಾರ್ಟಿಗಳಲ್ಲಿ ಜನರು ಅಂತರವಿಲ್ಲದೆ ಸೇರುತ್ತಾರೆ. ಆಗ ನಿಯಂತ್ರಣ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲರಿಗೂ ಟೆಸ್ಟ್

ಬ್ರಿಟನ್ ನಿಂದ ಬಂದವರನ್ನು ವಿಳಾಸ ಪತ್ತೆ ಮಾಡುತ್ತಿದ್ದೇವೆ. ಎಲ್ಲರನ್ನೂ ಕೂಡ ಟೆಸ್ಟ್ ಗೆ ಒಳಪಡಿಸುತ್ತೇವೆ. ಈಗಾಗಲೇ ಯಾರು ಬಂದಿದ್ದಾರೆ ಅವರ ಮಾಹಿತಿ ಪತ್ತೆ ಮಾಡಿದ್ದೇವೆ. ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಫೋನ್ ಮೂಲಕ ಹೇಳಿದ್ದೇವೆ ಎಂದರು.

ಇದನ್ನೂ ಓದಿ:ಸಾರ್ವಜನಿಕವಾಗಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವಂತಿಲ್ಲ: ಉಡುಪಿ ಡಿಸಿ

Advertisement

ಮೊದಲನೇ ಹಂತದಲ್ಲಿ ಬಂದವರಿಗೆ ಗೊತ್ತಿರಲಿಲ್ಲ. ಹೀಗಾಗಿ ಯಾವುದೇ ನಿರ್ಬಂಧ ಇಲ್ಲದೆ ಓಡಾಡಿದ್ದಾರೆ. ಅವರಿಗೂ ಕೂಡ ಫೋನ್ ಮೂಲಕ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದೇವೆ ಎಂದು ಹೇಳಿದರು.

ಗೃಹ ಇಲಾಖೆ ಟೆಂಡರ್ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಕರೆದು ಮಾತನಾಡಿದ್ದೇನೆ. ಆದೇಶ ಉಪದೇಶ ಕೊಡುವ ಎರಡೂ ಕೆಲಸವನ್ನು ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗಳು ಮಾಡುತ್ತಾರೆ ಎಂದು ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next