Advertisement

ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಬಗ್ಗೆ ಕೇಂದ್ರದ ಸ್ಪಷ್ಟನೆ, ನಿಬಂಧನೆ ಹೇಗಿದೆ?

09:39 AM Nov 28, 2019 | Nagendra Trasi |

ನವದೆಹಲಿ:ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60ರಿಂದ 58 ವರ್ಷಕ್ಕೆ ಇಳಿಕೆ ಮಾಡುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

Advertisement

ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಕೆ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಸರ್ ಎಂದು ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ಲಿಖಿತವಾಗಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ಕ್ಕೆ ಇಳಿಕೆ ಮಾಡಲಿದೆ ಎಂಬ ಸುದ್ದಿ ಹರಿದಾಡಿತ್ತು.

ನಿಬಂಧನೆಗಳ ಪ್ರಕಾರ, ಮೂಲಭೂತ ಹಕ್ಕು 56(ಜೆ), ಕೇಂದ್ರ ನಾಗರಿಕ ಸೇವಾ (ಪಿಂಚಣಿ) ಕಾಯ್ದೆ 48, 1972 ಮತ್ತು ಕಾಯ್ದೆ 16(3) (ತಿದ್ದುಪಡಿ)ರ ಆಲ್ ಇಂಡಿಯಾ ಸರ್ವಿಸಸ್ (ಮರಣ ಹಾಗೂ ನಿವೃತ್ತಿ ಲಾಭ) ಕಾಯ್ದೆ, 1958ರ ಅನ್ವಯ ಅವಧಿಗೂ ಮೊದಲೇ ಉದ್ಯೋಗಿಗಳು ನಿವೃತ್ತಿ ಪಡೆಯುವಂತೆ ಹೇಳುವ ಹಕ್ಕು ಇದೆ. ಅಲ್ಲದೇ ಪ್ರಾಮಾಣಿಕತೆಯ ಕೊರತೆ ಅಥವಾ ಕ್ರಿಯಾಶೀಲರಲ್ಲದ, ಸಾರ್ವಜನಿಕ ಹಿತಾಸಕ್ತಿ ಮೇಲೆ ಮೂರು ತಿಂಗಳ ನೋಟಿಸ್ (ಸಂಬಳ ಮತ್ತು ಭತ್ಯೆ ಸೇರಿ) ನೀಡಬಹುದಾಗಿದೆ ಎಂದು ಸಿಂಗ್ ವಿವರಿಸಿದ್ದಾರೆ.

ಒಂದು ವೇಳೆ ಗ್ರೂಪ್ ಎ ಅಥವಾ ಗ್ರೂಪ್ ಬಿ ಸೇವೆಯಲ್ಲಿದ್ದರೆ, ಪ್ರಧಾನ ಹುದ್ದೆಯಲ್ಲಿದ್ದರೆ, ಖಾಯಂ ಅಥವಾ ತಾತ್ಕಾಲಿಕ ಅರ್ಹತೆ ಮತ್ತು 35 ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ್ದರೆ, 50ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಇಂತಹ ನಿಬಂಧನೆಗಳು ಸರ್ಕಾರಿ ನೌಕರರಿಗೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next