Advertisement

ಆನೆಗಳ ಭ್ರೂಣ ಹತ್ಯೆ ಪ್ರಸ್ತಾಪ ಸರಕಾರದ ಮುಂದೆ ಇಲ್ಲ: ಸಚಿವ ಹೆಬ್ಬಾರ್

03:38 PM Sep 22, 2022 | Team Udayavani |

ಬೆಂಗಳೂರು: ಆನೆಗಳ ಭ್ರೂಣ ಹತ್ಯೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಆದರೆ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರ ಧನವನ್ನು ದುಪ್ಪಟ್ಟುಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವಿಧಾನಸಭೆಗೆ ತಿಳಿಸಿದ್ದಾರೆ.

Advertisement

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರ ಬೇಡಿಕೆ ಪ್ರಕಾರ ಆನೆ ಭ್ರೂಣ ಹತ್ಯೆ ಮಾಡುವ ಪ್ರಸ್ತಾಪ ಇಲ್ಲ. ಆದರೆ ಆನೆಗಳ ಕೊರಳಿಗೆ ರೇಡಿಯೋ ಕಾಲರ್ ಹಾಕಲಾಗುವುದು. ಆ ಮೂಲಕ ಅವುಗಳ ಚಲನ ವಲನ ಪರಿಶೀಲಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬದ್ದ:ವಿಧಾನಸಭೆಯಲ್ಲಿ ಡಾ.ಸುಧಾಕರ್

ಮೂಡಿಗೆರೆಯಲ್ಲಿ ಭಾರಿ ತೊಂದರೆ ನೀಡುತ್ತಿರುವ ಮೂಡಿಗೆರೆ ಭೈರಾ ಎಂಬ ಕಾಡಾನೆಯನ್ನು ಸೆರೆಹಿಡಿಯಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. 2000ನೇ ಇಸ್ವಿಯಿಂದ ಇದುವರೆಗೆ 74 ಆನೆಗಳನ್ನು ಹಿಡಿಯಲಾಗಿದೆ. ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 7.5 ಲಕ್ಷ ಪರಿಹಾರ ಧನವನ್ನು 15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ರೈಲ್ವೆ ಹಳಿ ಹಾಕುವುದಕ್ಕೆ 100 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next