ಶಿವಮೊಗ್ಗ: ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಿಲೇವಾರಿಯಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುತ್ತಿದ್ದು, ಜಾನುವಾರುಗಳು ಬಲಿಯಾಗುತ್ತಿರುವ ಘಟನೆ ನಡೆದಿದೆ.
ಘನತ್ಯಾಜ್ಯ ಸಮಪರ್ಕವಾಗಿ ವಿಲೇವಾರಿ ಮಾಡದ ಪರಿಣಾಮ ಜಾನುವಾರುಗಳು ಬಲಿಯಾಗುತ್ತಿವೆ. ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಬದಲು ಚಾನಲ್ ಪಕ್ಕದ ಖಾಲಿ ಜಾಗದಲ್ಲಿ ಹಾಕುತ್ತಿದ್ದು, ಶಿವಮೊಗ್ಗ ನಗರ ಸಮೀಪದ ಅನುಪಿನಕಟ್ಟೆ ಬಳಿ ಇರುವ ತುಂಗಾ ಎಡದಂಡೆ ಕಾಲುವೆಯ ಅಕ್ಕಪಕ್ಕದ ಖಾಲಿ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಭತ್ತದ ಕೃಷಿಗೆ ಹಾನಿ, ತೋಟಗಳಿಗೆ ನುಗ್ಗಿದ ನೀರು
ಮಹಾನಗರ ಪಾಲಿಕೆಯ ಕೆಲವು ವಾಹನ ಚಾಲಕರು ಘನತ್ಯಾಜ್ಯ, ಕಟ್ಟಡ ನಿರ್ಮಾಣದ ವೇಸ್ಟ್, ಕಲ್ಯಾಣ ಮಂಟಪದ ಘನತ್ಯಾಜ್ಯವನ್ನು ತಂದು ರಸ್ತೆ ಬದಿಯಲ್ಲಿಯೇ ವಿಲೇವಾರಿ ಮಾಡುತ್ತಿದ್ದಾರೆ. ಇದು ಜಾನುವಾರುಗಳಿಗೆ ಸಂಕಷ್ಟ ತಂದಿರಿಸಿದೆ.
ರಸ್ತೆ ಬದಿಯಲ್ಲಿ ಸುರಿದ ಘನತ್ಯಾಜ್ಯ ತಿಂದು ಅನುಪಿನಕಟ್ಟೆ ಗ್ರಾಮದಲ್ಲಿ ಕಳೆದ ಎರಡು ದಿನದಲ್ಲಿ 5 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದೆ. ಅನುಪಿನ ಕಟ್ಟೆ ಗ್ರಾಮದ ಚಿತ್ರಾ ಪ್ರಕಾಶ್, ರತ್ನಮ್ಮ ಬೋರೆಗೌಡ ಸೇರಿದಂತೆ ಹಲವರ ಮನೆಯ ಜಾನುವಾರುಗಳು ಸಾವನ್ನಪ್ಪಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಅನುಪಿನಕಟ್ಟೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಘನತ್ಯಾಜ್ಯವನ್ನು ಸಮಪರ್ಕವಾಗಿ ವಿಲೇವಾರಿ ಮಾಡುವಂತೆ ಒತ್ತಾಯ ಮಾಡಿದ್ದಾರೆ.