Advertisement

ಬೇಡ ಜಂಗಮ ಪ್ರಮಾಣಪತ್ರಕ್ಕಾಗಿ 27ಕ್ಕೆ ಮೆರವಣಿಗೆ

01:02 PM Jan 23, 2022 | Team Udayavani |

ಯಲಬುರ್ಗಾ: ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಯಲಬುರ್ಗಾ, ಕೂಕನೂರು ತಾಲೂಕಿನ ಬೇಡ ಜಂಗಮ ಸಮಾಜದಿಂದ ಶನಿವಾರ ಪೂರ್ವಭಾವಿ ಸಭೆ ನಡೆಯಿತು.

Advertisement

ಸಂಸ್ಥಾನ ಹಿರೇಮಠ ಪೀಠಾ ಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್‌ಗೆ ಜ. 27ರಂದು ಸ್ಥಳೀಯ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಬಳಿ ಬೆಳಗ್ಗೆ 10ಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಸಭೆಯಲ್ಲಿ ಟಿಎಪಿಸಿಎಂಎಸ್‌ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಜಂಗಮ ಸಮಾಜಕ್ಕೆ ಸಂವಿಧಾನ ಬದ್ಧ ಹಕ್ಕನ್ನು ರಕ್ಷಿಸಿ, ಜಾತಿ ಪ್ರಮಾಣ ಪತ್ರ ಕೊಡುವಂತೆ ಆಗ್ರಹಿಸಿ ಸಭೆಯಲ್ಲಿ ತಿರ್ಮಾನಿಸಿದ್ದಂತೆ ಜ. 27ರಂದು ಯಲಬುರ್ಗಾ ಪಟ್ಟಣದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಸಾನಿಧ್ಯ ವಹಿಸಿ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಜಂಗಮ ಸಮಾಜದಲ್ಲಿ ಅತ್ಯಂತ ಕಡು ಬಡತನದಲ್ಲಿದ್ದಾರೆ. ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ. ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಜಂಗಮ ಸಮಾಜಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ನೀಡಬೇಕು ಎಂದರು.

ಸಮಾಜದ ಅಧ್ಯಕ್ಷ ವೀರಯ್ಯ ಸಂಗನಾಳಮಠ, ವಿರೂಪಾಕ್ಷಯ್ಯ ಗಂಧದ, ಪ್ರಭಯ್ಯ ಶಾಸ್ತ್ರಿಗಳು ಸೊಪ್ಪಿಮಠ ಇತರರು ಮಾತನಾಡಿದರು. ಸಭೆಯಲ್ಲಿ ಪಪಂ ಸದಸ್ಯ ಅಂದಯ್ಯ ಕಳ್ಳಿಮಠ, ಸಿದ್ಧಲಿಂಗಸ್ವಾಮಿ ಉಳ್ಳಾಗಡ್ಡಿ, ಮಾಜಿ ಸದಸ್ಯ ಕರಿಬಸಯ್ಯ ಬಿನ್ನಾಳ, ಮುಖಂಡರಾದ ಡಾ| ಅಂದಾನಯ್ಯ ಶ್ಲಾಡಲಗೇರಿಮಠ, ಸೋಮಲಿಂಗಯ್ಯ ಹಿರೇಮಠ, ಬಸವರಾಜ ಮಠದ, ಸಂಗಯ್ಯ ಹಿರೇಮಠ, ಶಶಿಧರ ಹಿರೇಮಠ, ಕಳಕಯ್ಯ ಶಿವಪ್ಪಯ್ಯನಮಠ, ಶರಣಯ್ಯ ಸಾಲಿಮಠ, ಶಿವಕುಮಾರ ಸರಗಣಚಾರ, ಬಸವಲಿಂಗಯ್ಯ ಜಡಿಮಠ, ಕಲ್ಲನಗೌಡ ಪೊಲೀಸಪಾಟೀಲ್‌, ವರದಯ್ಯ ಹೊಸಮನಿ, ಈಶ್ವರಯ್ಯ ಶಿರೂರುಮಠ ಇತರರಿದ್ದರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next