Advertisement

ಕಾಂಗ್ರೆಸ್‌ ನಾಯಕರಿಂದ ತೊಂದರೆ ಆಗಿಲ್ಲ

06:10 AM Jul 17, 2018 | Team Udayavani |

ರಾಮನಗರ: “ಸಮ್ಮಿಶ್ರ ಸರ್ಕಾರ ನಡೆಸಲು ಕಾಂಗ್ರೆಸ್‌ನಿಂದ ಅನನುಕೂಲ ಆಗಿದೆ ಎಂದು ನಾನೆಲ್ಲಿಯೂ ಹೇಳಿಲ್ಲ. ಕಾಂಗ್ರೆಸ್‌ ನಾಯಕರಿಂದ ನನಗೇನೂ ತೊಂದರೆ ಆಗಿಲ್ಲ. ನನ್ನ ಕಣ್ಣೀರಿಗೆ ಕಾಂಗ್ರೆಸ್‌ ಕಾರಣವಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ನಗರದ ಜಿಪಂ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ನಡೆಸಲು ನನಗೆ ಕಾಂಗ್ರೆಸ್‌ನಿಂದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಮುಕ್ತ ಅವಕಾಶವೂ ಇದೆ. ಹೀಗಾಗಿಯೇ ರಾಹುಲ್‌ ಗಾಂಧಿಯವರನ್ನು ಪ್ರಶಂಸಿಸಿದ್ದೇನೆ. ಸ್ಥಳೀಯ ಕಾಂಗ್ರೆಸ್‌ ನಾಯಕರನ್ನೂ ಪ್ರಶಂಸಿಸಿದ್ದೇನೆ ಎಂದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ವಿಚಾರದಲ್ಲಿ ಸಾರ್ವಜನಿಕವಾಗಿ ತಮಗೆ ಪ್ರೋತ್ಸಾಹ ದೊರೆಯದ ಕಾರಣ ಮನಸ್ಸಿಗೆ ನೋವಾಗಿದೆ. ಹೀಗಾಗಿಯೇ ತನಗೆ ಕಣ್ಣೀರು ಬಂದಿದೆ ಎಂದರು. ತನ್ನ ಕಣ್ಣೀರಿಗೆ ಕಾಂಗ್ರೆಸ್‌ ನಾಯಕರ ಹಿಂಸೆ ಕಾರಣ ಎಂದು ಅಪಪ್ರಚಾರ ಮಾಡಿದ್ದೀರಿ, ನನ್ನ ಮಾತುಗಳನ್ನು ತಿರುಚಿದ್ದೀರಿ ಎಂದು ಅವರು ಮಾಧ್ಯಮಗಳನ್ನು ದೂರಿದರು.

ಅರುಣ್‌ ಜೇಟ್ಲಿಗೆ ತಿರುಗೇಟು: ತನ್ನನ್ನು ದುರಂತ ನಾಯಕ ಎಂದು ಲೇವಡಿ ಮಾಡಿರುವ ಕೇಂದ್ರ ಸಚಿವ ಅರುಣ್‌ ಜೇಟಿÉ ವಿರುದಟಛಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಜೇಟ್ಲಿಯವರು ತಾವು ದೃಢವಾದ ನಾಯಕ ಎಂಬುದನ್ನು ನೋಡಲಿದ್ದಾರೆ ಎಂದರು. ದುರಂತ ನಾಯಕ ರೈತರ 40 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಿದ್ದಾನೆ, ದೃಢ ನಾಯಕನಿಂದ (ಪ್ರಧಾನಿ ನರೇಂದ್ರ ಮೋದಿ) ಆಗದ ಕೆಲಸ ಮಾಡಿ ತೋರಿಸಿದ್ದೇನೆ. ಬಿಜೆಪಿಯವರಿಂದ ತಾನೇನೂ ಹೇಳಿಸಿಕೊಳ್ಳುವುದಿಲ್ಲ ಎಂದರು.

Advertisement

ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲವೇ?: ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲವೇ? ಹೌದು ಎನ್ನುತ್ತಾರೆ ಸಿಎಂ  ಎಚ್‌.ಡಿ.ಕುಮಾರಸ್ವಾಮಿ. ರಾಮನಗರದಲ್ಲಿ ರೇಷ್ಮೆ ಬೆಳೆಗಾರರ ಸಂಕಷ್ಟ ಆಲಿಸುವ ವೇಳೆ ಅವರು ರಾಜ್ಯದ ಆರ್ಥಿಕ
ಪರಿಸ್ಥಿತಿಯನ್ನು ತೆರೆದಿಟ್ಟರು. ರೇಷ್ಮೆ ಧಾರಣೆಗಳು ಕುಸಿಯುತ್ತಿರುವುದರಿಂದ ಬೆಂಬಲ ಬೆಲೆ ಹೆಚ್ಚಿಸುವಂತೆ ಬೆಳೆಗಾರರು ಮಾಡಿಕೊಂಡ ಮನವಿಗೆ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ವಿವರಿಸಿದರು.

ರೈತರನ್ನು ಸಂಕಷ್ಟದಿಂದ ಪಾರು ಮಾಡಲು 40 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು, ಆರ್ಥಿಕ ಇಲಾಖೆಯ ಅಧಿಕಾರಿಗಳು ಇನ್ನೂ ಚೇತರಿಸಿಕೊಂಡಿಲ್ಲ ಎಂದರು. ಒಂದೊಂದು ಪೈಸೆಯನ್ನು ಲೆಕ್ಕಾಚಾರ ಮಾಡಿ ವೆಚ್ಚ ಮಾಡಬೇಕಾಗಿದೆ. ಹೊಸ ಕಾರ್ಯಕ್ರಮಗಳನ್ನು ನೀಡಲು ಸಹ ಹತ್ತಾರು ಬಾರಿ ಯೋಚನೆ ಮಾಡುವಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next