Advertisement

ಬೇಸಿಗೆ ಬಾಯಾರಿಕೆ ನೀಗಿಸುವ ಭರವಸೆ

05:28 PM Mar 22, 2020 | Suhan S |

ಬೀಳಗಿ: ತಾಲೂಕಿನ ಜೀವನದಿಗಳಾಗಿರುವ ಕೃಷ್ಣೆ-ಘಟಪ್ರಭೆಯ ಒಡಲು ಈ ಬಾರಿ ತುಂಬಿಕೊಂಡಿರುವುದು ಬೇಸಿಗೆಯ ಬಾಯಾರಿಕೆ ನೀಗಿಸುವ ಭರವಸೆ ಮೂಡಿಸಿದೆ.

Advertisement

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನೀರಿನ ಕೊರತೆ ಎಲ್ಲೂ ಎದ್ದು ಕಾಣುತ್ತಿಲ್ಲ. ತಾಲೂಕಿನ ಸೊನ್ನ ಗ್ರಾಮದ ಕಂದಗಲ್ಲ ಅವರ ತೋಟದ ವಸತಿ ಪ್ರದೇಶ ಹಾಗೂ ಚಿಕ್ಕಸಂಗಮದ ಹತ್ತಿರ (ಎಸ್ಸಿ ಕಾಲೋನಿ) ಮಡ್ಡಿಮನಿ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಿರುವುದು ಕಂಡು ಬಂದಿದೆ. ಈ ಸ್ಥಳಗಳಲ್ಲಿ ಕೂಡಲೇ ಕೊಳವೆ ಬಾವಿ ಕೊರೆಸುವ ಮೂಲಕ ಕುಡಿಯುವ ನೀರಿನ ತೊಂದರೆ ನೀಗಿಸುವುದು ಅಗತ್ಯವಿದೆ.

ನಿತ್ಯ 2.54 ಎಂಎಲ್‌ಡಿ ನೀರು: 20 ಸಾವಿರ ಜನಸಂಖ್ಯೆಯಿರುವ ಪಟ್ಟಣದಲ್ಲಿ, 4106 ವಾಸದ ಮನೆಗಳಿವೆ. 480 ವಾಣಿಜ್ಯ ಮಳಿಗೆಗಳಿವೆ. 2663 ವಾಸದ ಮನೆಗಳಿಗೆ ಹಾಗೂ 84 ವಾಣಿಜ್ಯ ಮಳಿಗೆಗಳಿಗೆ ನಳದ ಸಂಪರ್ಕ ಕಲ್ಪಿಸಲಾಗಿದೆ. ಇನ್ನು 46 ಕೊಳವೆ ಬಾವಿ ಮತ್ತು 2 ಕೈ ಪಂಪ್‌ಗ್ಳು ಸುಸ್ಥಿತಿಯಲ್ಲಿವೆ. 7 ಶುದ್ಧ ಕುಡಿವ ನೀರಿನ ಘಟಕಗಳಲ್ಲಿ 5 ಸುಸ್ಥಿತಿಯಲ್ಲಿದ್ದು, 2 ರಿಪೇರಿ ಕಾಣಬೇಕಿವೆ. ನಗರ ನಿವಾಸಿಗಳಿಗೆ ನಿತ್ಯ 2.54 ಎಂಎಲ್‌ಡಿ (ಮಿಲಿಯನ್‌ ಲೀ,) ನೀರು ಅಗತ್ಯವಿದೆ. ಆಲಮಟ್ಟಿ ಹಿನ್ನೀರಿನ ಕೃಷ್ಣಾ ನದಿಯ ಗುಳಬಾಳ ಜಾಕ್‌ವೆಲ್‌ನಿಂದ ನಿತ್ಯ 1.33 ಎಂಎಲ್‌ಡಿ ನೀರು ಲಭ್ಯವಾಗುತ್ತಿದೆ. ದಿನನಿತ್ಯ ಒಟ್ಟು 1.21 ಎಂಎಲ್‌ಡಿ ಕೊರತೆಯಿರುವ ನೀರನ್ನು ಕೊಳವೆ ಬಾವಿ ಮೂಲಕ ಭರಿಸಲಾಗುತ್ತಿದೆ.

ನೀರಿಗೆ ಬರವಿಲ್ಲ: ತಾಲೂಕಿನಾದ್ಯಂತ ಜನವಸತಿಪ್ರದೇಶ ಸೇರಿ ಒಟ್ಟು 85 ಗ್ರಾಮಗಳಿವೆ. ಇದರಲ್ಲಿ ಜನವಸತಿ ಪ್ರದೇಶ ಸೇರಿ ಒಟ್ಟು 23 ಗ್ರಾಮಗಳು ಕೊಳವೆ ಬಾವಿ ನೀರನ್ನು ಅವಲಂಬಿಸಿವೆ. ತಾಲೂಕಿನಾದ್ಯಂತ 83 ಶುದ್ಧ ಕುಡಿವ ನೀರು ಘಟಕಗಳಲ್ಲಿ ತಾಲೂಕಿನ ತೆಗ್ಗಿ ತಾಂಡಾ, ಮುಂಡಗನೂರ ಆರ್‌ಸಿ ಹೊರತುಪಡಿಸಿ ಇನ್ನುಳಿದ 81 ಶುದ್ಧ ಕುಡಿವ ನೀರಿನ ಘಟಕಗಳು ಸುಸ್ಥಿಯಲ್ಲಿವೆ. 263 ಕೊಳವೆ ಬಾವಿ ಹಾಗೂ 96 ಕೈ ಪಂಪ್‌ಗ್ಳು ನೀರಿನ ದಾಹ ನೀಗಿಸಲು ನೆರವಾಗುತ್ತಿವೆ. ಕೃಷ್ಣಾ-ಘಟಪ್ರಭೆ

ನದಿ ಅವಲಂಬಿತ ಒಟ್ಟು 6 ಬಹುಗ್ರಾಮ ಕುಡಿವ ನೀರು ಯೋಜನೆಯಿಂದ ಒಟ್ಟು 62 ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ಸದ್ಯ, ಬೇಸಿಗೆ ಎದುರಿಸಲು ನೀರಿಗೇನು ಬರವಿಲ್ಲ. ಆದರೂ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸುವುದು ಅಗತ್ಯ ತಾಲೂಕಿನ ಸೊನ್ನ ಗ್ರಾಮದ ಕಂದಗಲ್ಲ ಅವರ ತೋಟದ ವಸತಿ ಪ್ರದೇಶಕ್ಕೆ ನೀರಿನ ತೀವ್ರ ತೊಂದರೆಯಿದೆ. ಈ ಭಾಗದಲ್ಲಿ ಅಧಿಕಾರಿಗಳು ಕೂಡಲೇ ಶಾಶ್ವತವಾಗಿ ಕುಡಿವ ನೀರಿನ ಯೋಜನೆ ಕಲ್ಪಿಸುವುದು ಅಗತ್ಯವಿದೆ.  –ಡೋಂಗ್ರಿಸಾಬ್‌ ಕುದರಿ, ತಾಪಂ ಸದಸ್ಯರು, ಬೀಳಗಿ

Advertisement

 

-ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next