Advertisement

ಯಾವುದೇ ಒತ್ತಡ, ಬೆದರಿಕೆಗೆ ಹೆದರಲ್ಲ

04:59 PM Dec 20, 2021 | Team Udayavani |

ಮಸ್ಕಿ: ಪುರಸಭೆ ವಾರ್ಡ್‌ಗಳಲ್ಲಿನ ನಾಮಿನೇಷನ್‌ ವಾಪಸ್‌ ಪಡೆಯಲು ಆಫರ್‌ ಮಾಡಿದ್ರೂ ನಾವು ಆಸೆ, ಆಮಿಷಕ್ಕೆ ಒಳಗಾಗದೇ ಜನಸೇವೆ ಉದ್ದೇಶದಿಂದ ಚುನಾವಣೆ ಎದುರಿಸುತ್ತಿದ್ದೇವೆಂದು ಜೆಡಿಎಸ್‌ ಮುಖಂಡ ರಾಘವೇಂದ್ರ ನಾಯಕ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ನಗರದಲ್ಲಿರುವ ಅವರ ನಿವಾಸದಲ್ಲಿ ಜೆಡಿಎಸ್‌ನ 10 ಜನ ಅಭ್ಯರ್ಥಿಗಳ ಜತೆಗೂಡಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ಗರಡಿಯಲ್ಲಿ ಬೆಳೆದಿದ್ದೇನೆ. ಅವರಿಗಾಗಿ ಪಕ್ಷ ಸಂಘಟನೆ ಮಾಡಿ ದುಡಿದಿದ್ದೇನೆ. ಆದರೆ ನಾವು ಯಾವುದೇ ಹಣ, ಇತರೆ ಆಸೆ, ಆಮಿಷಕ್ಕೆ ಬಲಿಯಾಗಿಲ್ಲ. ಯಾವುದೇ ಒತ್ತಡ, ಬೆದರಿಕೆಗಳಿಗೂ ಹೆದರಲ್ಲ. ಚುನಾವಣೆ ಧೈರ್ಯದಿಂದ ಎದುರಿಸುತ್ತೇವೆ. ಜನತೆ ಮುಂದೆ ಹೋಗಿ ಮತ ಕೇಳುತ್ತೇವೆ ಎಂದರು.

ಎರಡೂ ಪಕ್ಷ ಒಂದೇ: ಮಸ್ಕಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳು ಒಂದೇಯಾಗಿವೆ. ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದ್ದಾರೆ. 19ನೇ ವಾರ್ಡ್‌ನಲ್ಲಿ ನಾಮಪತ್ರ ತಿರಸ್ಕರಿಸಿ ನಾಟಕವಾಡಿದರು. 11ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರವನ್ನೇ ವಾಪಸ್‌ ಪಡೆದರು.

ಜೆಡಿಎಸ್‌ನಿಂದ ನಾವು ಅಭ್ಯರ್ಥಿಗಳನ್ನು ಹಾಕದಿದ್ದರೆ ಇಂತಿಷ್ಟು ಸೀಟು ಎಂದು ಹಂಚಿಕೊಳ್ಳುತ್ತಿದ್ದರು. ಇದಕ್ಕೆ ನಾವು ಅವಕಾಶ ಕೊಡಲ್ಲ. ಜನರ ತೀರ್ಪು ಅಂತಿಮವಾಗಬೇಕು. ಇದಕ್ಕಾಗಿ ಚುನಾವಣೆ ಮೂಲಕ ಜನರ ಮುಂದೆ ಹೋಗುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ 10 ವಾಡ್‌ ìನ ಅಭ್ಯರ್ಥಿಗಳು, ನಾವು ಯಾರ ಒತ್ತಡಕ್ಕೂ ಮಣಿಯಲ್ಲ. ಧೈರ್ಯದಿಂದ ಕಣದಲ್ಲುಳಿದಿದ್ದೇವೆ. ಪ್ರಚಾರವೂ ಮಾಡುತ್ತೇವೆ. ಜನರು ಏನೇ ತೀರ್ಪು ನೀಡಲಿ ಅದನ್ನು ಸ್ವೀಕರಿಸುತ್ತೇವೆ ಎಂದರು.

Advertisement

ಜೆಡಿಎಸ್‌ ಮುಖಂಡರಾದ ಮಲ್ಲಿಕಾರ್ಜುನ ಭಾವಿಕಟ್ಟಿ, ಮೌನೇಶ ಬಳಗಾನೂರು, ಮಂಜುನಾಥ ಗದ್ದಿಗೌಡ್ರ, ದುರುಗೇಶ ಗುಡಿಸಲಿ, ಅರುಣಕುಮಾರ ಗುಡಿಸಲಿ, ನಾಗರಾಜ ಹಂಚಿನಾಳ, ಸಿಕಂದರ್‌, ಯಮನೂರು ನಾಯಕ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next