Advertisement
ಸೋಮವಾರ ಇಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎಪ್ರಿಲ್‌ನಲ್ಲಿ ಮಳೆಯೂ ಬಂದಿರು ವುದರಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆಯಾಗಿಲ್ಲ. ಮೇ 30ರ ವರೆಗೆ ವಿದ್ಯುತ್ ಉತ್ಪಾದನೆ ಸಂಬಂಧಿಸಿ ಎದುರಾಗಬಹು ದಾದ ಸವಾಲುಗಳ ಕುರಿತು ಸಿಎಂ ಮಾರ್ಗದರ್ಶನದಲ್ಲಿ 2 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲ ಟ್ರಾನ್ಸ್ ಫಾರ್ಮರ್(ಟಿಸಿ)ಗಳನ್ನು ವ್ಯವಸ್ಥಿತ ವಾಗಿಸುವ ನೆಲೆಯಲ್ಲಿ ನಿರ್ವಹಣೆ ಅಭಿಯಾನವನ್ನು ಮೇ 5ರಿಂದ 15ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳ ಲಾಗಿದೆ. ಈ ಬಗ್ಗೆ ಎಲ್ಲ ಎಸ್ಕಾಂ ಮತ್ತು ನಿಗಮಗಳಿಗೆ ಸೂಚನೆ ನೀಡಲಾಗಿದೆ. ತಾಂತ್ರಿಕ ದೋಷಗಳಿಂದ ಕೆಲವು ಕಡೆ ಟಿಸಿ ಸ್ಫೋಟಗೊಂಡು ಪ್ರಾಣಹಾನಿ ಸಂಭವಿಸಿತ್ತು. ಮಳೆಗಾಲವೂ ಆರಂಭ ವಾಗುವುದರಿಂದ ಎಚ್ಚರ ವಹಿಸಬೇಕಿದೆ ಎಂದರು. ಮಧ್ವಾಚಾರ್ಯರ
ಜಯಂತಿ: ಸಿಎಂ ಜತೆ ಚರ್ಚೆ
ಎಲ್ಲ ಮಹನೀಯರ ಜಯಂತಿ ಗಳು ಬೆಂಗಳೂರು ಕೇಂದ್ರಿಕೃತ ವಾಗಿರಬಾರದು ಎಂಬ ನೆಲೆಯಲ್ಲಿ ಜಿಲ್ಲಾ ಕೇಂದ್ರಿತವಾಗಿ ರಾಜ್ಯಮಟ್ಟದ ಜಯಂತಿ ಆಚರಣೆಗೆ ಯೋಜನೆ ರೂಪಿಸಲಾಗಿದೆ. ಮಧ್ವಾಚಾರ್ಯರ ಜಯಂತಿ ಆಚರಿಸುವ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
Related Articles
ಹಾರಿಸುವ ಪ್ರಿಯಾಂಕ್
ಪಿಎಸ್‌ಐ ಪ್ರಶ್ನೆಪತ್ರಿಕೆ ಅಕ್ರಮಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಿಯಾಂಕ್ ಖರ್ಗೆ ಅವರು ಗಾಳಿಯಲ್ಲಿ ಗುಂಡು ಹಾರಿಸುವುದು ಮಾತ್ರ. ಅವರಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟತೆ ಇಲ್ಲ. ಸಿಐಡಿ ನೋಟಿಸ್‌ಗೆ ಉತ್ತರ ಕೊಡದೆ ಪಲಾಯನವಾದ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಇನ್ನೂ 20 ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಲು ಜನರು ಬೇಡಿಕೆ ಇಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಅತ್ಯಂತ ಕಷ್ಟದಲ್ಲಿ ಗೆದ್ದಿದ್ದಾರೆ ಎಂದರು.
Advertisement
ಬಿಜೆಪಿ ಸಂಘಟನೆಯಲ್ಲಿ ಹೊಸ ತನ ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿ ಕಾರ್ಯಕರ್ತನೂ ಸಮಾಜಕ್ಕೆ ಪೂರಕವಾಗುವಂತ ಆಲೋಚನೆ ಯೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
ಕನ್ನಡಕ್ಕೆ ಧಕ್ಕೆಯಾದರೆ ಸಹಿಸೆವುಬೆಳಗಾವಿಯಲ್ಲಿ ಎಂಇಎಸ್ ಕನ್ನಡ ವಿರೋಧಿ ಚಟುವಟಿಕೆ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾಡಳಿತ, ಗೃಹ ಇಲಾಖೆ ಕಠಿನ ಕ್ರಮ ತೆಗೆದುಕೊಳ್ಳಲಿದೆ. ಹಿಂದಿ ಭಾಷೆ ಹೇರಿಕೆ ಎಂಬುದಿಲ್ಲ, ಹಿಂದಿ ಅನ್ಯ ರಾಜ್ಯದವರೊಂದಿಗೆ ವ್ಯವಹರಿಸಲು ಸಂಪರ್ಕ ಭಾಷೆಯಾಗಿ ಬಳಸುವ ಬಗ್ಗೆ ಕೇಂದ್ರ ಸರಕಾರ ಹೇಳಿದೆ. ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ, ಕನ್ನಡಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂದು ಸಚಿವ ಸುನಿಲ್ ಹೇಳಿದರು. ಮಸೀದಿ ಆಜಾನ್‌ಗೆ ಸಂಬಂಧಿಸಿ ಕೋರ್ಟ್ ನೀಡಿರುವ ತೀರ್ಪಿಗೆ ಸರಕಾರ ಬದ್ಧವಾಗಿದೆ. ಆಜಾನ್ ಮೊಳಗುವ ಮಸೀದಿ ಎದುರು ಭಜನೆ ನಡೆಸುವ ಹಿಂದೂಪರ ಸಂಘಟನೆಗಳ ನಿಲುವಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.