Advertisement
ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿ, ನಾನು ಬಂದರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದಲ್ಲ. ದುರ್ಘಟನೆ ಸಂಭವಿಸಿದಾಗ ನೊಂದವರಿಗೆ ಸಾಂತ್ವನ ಹೇಳುವುದು, ಆತ್ಮವಿಶ್ವಾಸ ತುಂಬುವುದು ನಮ್ಮ ಕೆಲಸ ಹಾಗೂ ಮಾನವೀಯತೆ. ಆದರೂ ಕೇಂದ್ರ ಸರಕಾರದಿಂದ ನೊಂದ ಕುಟುಂಬಗಳಿಗೆ ಏನೆಲ್ಲ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ರಾಜ್ಯ ಸರಕಾರ ಏನು ಮಾಡಬೇಕೋ ಅದನ್ನು ಮಾಡಲಿ. ಹೆಚ್ಚಿನ ಪರಿಹಾರ ಕೊಡಲು ರಾಜ್ಯ ಸರಕಾರ ಮನಸ್ಸು ಮಾಡಬೇಕು ಎಂದರು.
ಈ ದುರಂತದಲ್ಲಿ ಒಂದೇ ಕುಟುಂಬದ ಐವರು ಮರಣ ಹೊಂದಿದ್ದು ಆ ಕುಟುಂಬದ ಒಬ್ಬರಿಗೆ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ ಅವರು, ತಮ್ಮ ಭೇಟಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕೆಗೆ ಪ್ರತಿಕ್ರಿಯಿಸಿ, ಅವರಿಗೆ ಚರ್ಚಿಸಲು ಬೇರೆ ವಿಷಯಗಳಿಲ್ಲ ಎಂದರು. ಹಾನಿ ವೀಕ್ಷಿಸಿದ ಎಚ್‌ಡಿಕೆ
ಸುರಿಯುವ ಮಳೆಯ ನಡುವೆಯೇ 5 ನಿಮಿಷಗಳ ಕಾಲ ಕೇಂದ್ರ ಸಚಿವ ಕುಮಾರಸ್ವಾಮಿ ಶಿರೂರು ಗುಡ್ಡ ಕುಸಿತದ ಪ್ರದೇಶ ವೀಕ್ಷಿಸಿದರು. ಅಪಾರ ಪ್ರಮಾಣದ ಮಣ್ಣು, ಕಲ್ಲು ನೋಡಿ ದಿಗ್ಭ್ರಮೆ ವ್ಯಕ್ತಪಡಿಸಿದರು.