Advertisement
ಇವಿಎಂ ಜತೆ ವಿವಿ ಪ್ಯಾಟ್ಕುಡಿಯುವ ನೀರು, ತಂಗುದಾಣ, ಶೌಚಾಲಯ ಹಾಗೂ ಅಂಗವಿಕಲರಿಗೆ ಅನುಕೂಲವಾಗುವಂತೆ ರ್‍ಯಾಂಪ್ ವ್ಯವಸ್ಥೆ ಮಾಡಲಾಗುವುದು. ಇವಿಎಂ ಯಂತ್ರಗಳ ಜತೆ ಈ ಬಾರಿಯೂ ವಿವಿ ಪ್ಯಾಟ್‌ಗಳನ್ನು ಉಪಯೋಗಿಸಲಾಗುತ್ತಿದ್ದು, ನಿಗದಿಗಿಂ ತಲೂ ಹೆಚ್ಚುವರಿ ಯಂತ್ರಗಳು ಲಭ್ಯವಿವೆ. ಜಿಪಿಎಸ್ ವ್ಯವಸ್ಥೆಯ ಮೂಲಕ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಚಲನವಲದ ಕುರಿತಂತೆ ಮಾಹಿತಿ ಲಭ್ಯವಾಗಲಿದೆ.
ನೀತಿ ಸಂಹಿತೆಗೆ ಅನುಗುಣವಾಗಿ ಬ್ಯಾನರ್, ಪೋಸ್ಟರ್, ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ. ಖಾಸಗಿ ಸ್ಥಳಗಳಲ್ಲಿ ಹಾಕಿರುವುದನ್ನೂ ತೆರವುಗೊಳಿಸಬೇಕು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕಾಗುತ್ತದೆ. ಸಂಬಂಧಪಟ್ಟವರು ತೆರವುಗೊಳಿಸದಿದ್ದರೆ 24 ಗಂಟೆಯೊಳಗೆ ನಾವೇ ತೆರವುಗೊಳಿಸುತ್ತೇವೆ ಎಂದರು. ಹಣ ವರ್ಗಾವಣೆ-ಸಾಗಾಟ ಎಚ್ಚರ!
ಯಾವುದೇ ವ್ಯಕ್ತಿ ಅಥವಾ ಪಕ್ಷದವರು ಅಕೌಂಟ್ ಮೂಲಕ ಹಣ ವರ್ಗಾವಣೆ ಅಥವಾ ನಗದನ್ನು ಕೊಂಡೊಯ್ಯುವ ಬಗ್ಗೆ ನಿಗಾ ಇರಿಸಲಾಗುತ್ತದೆ. ಚೆಕ್‌ಪೋಸ್ಟ್, ಫ್ಲೆಯಿಂಗ್ ಸ್ಕ್ವಾಡ್, ಮೇಲ್ವಿಚಾರಣ ತಂಡಗಳು, ವೀಡಿಯೋ ಮೇಲ್ವಿಚಾರಣಾ ತಂಡಗಳು ಕಾರ್ಯನಿರ್ವಹಿಸಲಿವೆ. ನಿಗದಿಗಿಂತ ಅಧಿಕ ಮೊತ್ತದ ಹಣವನ್ನು ಆಯೋಗದ ಅಧಿಕಾರಿಗಳು ಪರಿಶೀಲಿಸಿ, ತನಿಖೆ ನಡೆಸಲಿದ್ದಾರೆ. ಹಣ ಚುನಾವಣೆಗೆ ಸಂಬಂಧಿಸಿದ್ದಲ್ಲ ವಾಗಿದ್ದಲ್ಲಿ ಮತ್ತು ಸೂಕ್ತ ದಾಖಲೆಗಳನ್ನು ಒದಗಿಸಿದರೆ 24 ಗಂಟೆಯೊಳಗೆ ಜಿ.ಪಂ. ಸಿಇಒ ಅಧ್ಯಕ್ಷತೆಯ ಸಮಿತಿಯು ಮರಳಿಸಲಿದೆ. ಅಭ್ಯರ್ಥಿಯ 10,000 ರೂ.ಗಿಂತ ಅಧಿಕ ಮೊತ್ತದ ಹಣ ವರ್ಗಾವಣೆಯ ಬಗ್ಗೆ ಆಯೋಗ ನಿಗಾ ಇರಿಸುತ್ತದೆ. 10 ಲ.ರೂ.ಗಿಂತ ಹೆಚ್ಚಿನ ಮೊತ್ತ ಸಾಗಿಸಿದರೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
Related Articles
Advertisement
ಅಭ್ಯರ್ಥಿ ವೆಚ್ಚ 70 ಲ.ರೂ.ಅಭ್ಯರ್ಥಿ 70 ಲ.ರೂ.ಗಳನ್ನು ಮಾತ್ರ ವೆಚ್ಚ ಮಾಡಲು ಅವಕಾಶವಿದೆ. ಪಕ್ಷಗಳ ಖರ್ಚಿನ ಮೇಲೆ
ನಿಗಾ ಇರಿಸಲು ವೆಚ್ಚ ಮೇಲ್ವಿಚಾರಣಾ ಘಟಕ ಮತ್ತು ಕ್ಷೇತ್ರವಾರು ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಮಾಧ್ಯಮಗಳು ಪ್ರಕಟಿಸುವ ಸುದ್ದಿ, ಜಾಹೀರಾತಿನ ಕುರಿತು ಜಿ.ಪಂ. ಮುಖ್ಯ ಯೋಜನಾಧಿಕಾರಿ ಅಧ್ಯಕ್ಷತೆಯ ಮಾಧ್ಯಮ ಮೇಲ್ವಿಚಾರಣಾ ಸಮಿತಿ ಇದೆ. ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್‌ಗಳನ್ನು ಸಾಗಿಸಲಾಗುವುದು. ವೇಳಾಪಟ್ಟಿ
ಮಾ. 19ರಂದು ಚುನಾವಣೆ ನೋಟಿಸ್ ಹೊರಡಿಸಲಾಗುತ್ತದೆ. ಮಾ. 26ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ಮಾ. 27ರಂದು ನಾಮಪತ್ರ ಪರಿಶೀಲನೆ, ಮಾ. 29ರಂದು ನಾಮಪತ್ರ ಹಿಂದೆೆಗೆದುಕೊಳ್ಳಲು ಕೊನೆಯ ದಿನಾಂಕ, ಎ. 18ರಂದು ಚುನಾವಣೆ, ಮೇ 23ರಂದು ಮತ ಎಣಿಕೆ.