Advertisement
ಫೋಬಿಯಾ ಎಂದರೆ ಭಯ ಎಂದರ್ಥ. ಯಾವುದಾದರೊಂದು ವಸ್ತು ಅಥವಾ ಸನ್ನಿವೇಶದ ಅಸಹಜ, ಅರ್ಥಹೀನ ಅತಿರೇಕದ ಭಯವೆನ್ನುವುದು ಫೋಬಿಯಾದ ವ್ಯಾಖ್ಯಾನ. ಫೋಬಿಯಾವನ್ನು ಒಂದು ರೀತಿಯ ಮಾನಸಿಕ ಅಸಮತೋಲನ ಎಂದು ಕರೆಯಲಾಗುತ್ತದೆ. ಪೋಬಿಯಾದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ಇಲ್ಲದ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಕೆಲವು ಸನ್ನಿವೇಶಗಳು ಪ್ರಾಣಕ್ಕೆ ಸಂಚಕಾರ ತರುವಷ್ಟು ಅಪಾಯಕಾರಿಯಾಗಬಲ್ಲವೆಂದರೆ ಆಶ್ಚರ್ಯವೆನಿಸಬಹುದು.
Related Articles
Advertisement
ಏರೋ ಫೋಬಿಯಾ: ಹಾರಾಟದ ಬಗ್ಗೆ ಭಯ, ಇವರಿಗೆ ವಿಮಾನ ಪ್ರಯಾಣದ ಭಯವೂ ಇರುತ್ತದೆ.
ಡ್ರೈವಿಂಗ್ ಫೋಬಿಯಾ: ವಾಹನ ಚಾಲನೆ ಬಗ್ಗೆ ಭಯ, ರಕ್ತ, ಗಾಯ, ಇಂಜೆಕ್ಷನ್ ಫೋಬಿಯಾ
ಅಕ್ವಾಫೋಬಿಯಾ: ನೀರಿನ ಭಯ
ಝೂಫೋಬಿಯಾ: ಪ್ರಾಣಿಗಳ ಭಯ
ಎಕ್ರೋಫೋಬಿಯಾ: ಎತ್ತರದ ಭಯ
ಕ್ಲಾಸ್ಟ್ರೋ ಫೋಬಿಯಾ: ಇಕ್ಕಟ್ಟಿನ ಜಾಗದ ಭಯ
ಹೈಪೋಕೊಂಡ್ರಿಯಾ: ರೋಗ ಪೀಡಿತರಾಗುವ ಭಯ
ಎಸ್ಲ್ಕಾಫೋಬಿಯಾ: ಎಸ್ಕಾಲೇಟರ್‌ನಲ್ಲಿ ಹೋಗುವ ಭಯ
ಚಿಕಿತ್ಸೆ
ಯಾವುದೇ ಫೋಬಿಯಾವನ್ನು ಗುಣಪಡಿಸಬಹುದಾಗಿದೆ. ಔಷಧಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯ ಕಡೆಗೆ ಹೆಚ್ಚಿನ ಗಮನ ನೀಡುವುದು, ಪ್ರೀತಿಯಿಂದ ಅವರನ್ನು ಗುಣಪಡಿಸಬಹುದಾಗಿದೆ.
ಯಾವುದೇ ಫೋಬಿಯಾವನ್ನು ಗುಣಪಡಿಸಬಹುದಾಗಿದೆ. ಔಷಧಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯ ಕಡೆಗೆ ಹೆಚ್ಚಿನ ಗಮನ ನೀಡುವುದು, ಪ್ರೀತಿಯಿಂದ ಅವರನ್ನು ಗುಣಪಡಿಸಬಹುದಾಗಿದೆ.
1 ಖನ್ನತೆಗೆ ನೀಡುವ ಔಷಧಗಳನ್ನು ವೈದ್ಯರು ನೀಡ ಬಹುದು. ಅದನ್ನು ವೈದ್ಯರು ಹೇಳಿದ ಸಮಯ ದವರೆಗೆ ಸರಿಯಾಗಿ ಬಳಸಬೇಕು. ವೈದ್ಯರ ಮಾರ್ಗದರ್ಶ ತೆಗೆದುಕೊಳ್ಳುವುದು ಸೂಕ್ತ.
2 ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ, ಕ್ರೀಡೆ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
3 ಭಯ ಪಡುವ ವಿಚಾರದ ಕುರಿತಂತೆ ಅದನ್ನು ಸರಿಯಾಗಿ ನಿಭಾಯಿಸುವ ಕೌಶಲವನ್ನು ತಿಳಿಸಲು ಕೌನ್ಸೆಲಿಂಗ್ ಪಡೆಯುವುದು ಅವಶ್ಯ.
4 ವ್ಯಕ್ತಿಯ ಜತೆ ನಾವಿದ್ದೇವೆ ಎಂದು ಹೇಳುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು
5 ವಾತಾವರಣದಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ವ್ಯಕ್ತಿ ನೆಮ್ಮದಿಯಿಂದ ಇರುವಂತೆ ಮಾಡುವುದು.ಅಂದರೆ ಅವರನ್ನು ಪ್ರಶಾಂತವಾದ ಜಾಗಕ್ಕೆ ಕರೆದುಕೊಂಡು ಮನಸ್ಸು ಬದಲಾಯಿಸುವುದು.
ಸೂಕ್ತ ಚಿಕಿತ್ಸೆಯಿಂದ ಗುಣಮುಖ
ವಿವಿಧ ಬಗೆಯ ಫೋಬಿಯಾಗಳನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸ ಬಹುದು. ಅದಕ್ಕಾಗಿ ಫೋಬಿಯಾಕ್ಕೊಳಗಾದವರು ಹಾಗೂ ಅವರ ಮನೆಯವರ ಸಹಕಾರ ಅಗತ್ಯ. – ಡಾ| ಸುಚೇತ ಮಾನಸಿಕ ತಜ್ಞರು
ಲಕ್ಷಣಗಳು
ಫೋಬಿಯಾಕ್ಕೆ ಒಳಗಾದವರು ಅವರು ಹೆದರುವ ವಿಷಯ, ಜಾಗ, ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಅಪರಿಚಿತ ದಾರಿ, ಸ್ಥಳಗಳಲ್ಲಿ ಭಯ ಅಥವಾ ಪರಿಚಿತ ಸ್ಥಳಗಳ ಬಗ್ಗೆ ಒಂದು ರೀತಿ ನಿರ್ಲಕ್ಷ್ಯ ವಹಿಸುತ್ತಾರೆ. ಅಲ್ಲದೆ, ಒಂದು ನಿರ್ದಿಷ್ಟ ವಿಷಯದ ಬಗ್ಗೆ ಇವರಲ್ಲಿ ಅವಿವೇಕದ ಭಯ ಕಾಡುತ್ತದೆ. ಸಾಧ್ಯವಾಗುವವರೆಗೆ ಬೇರೆ ವ್ಯಕ್ತಿಗಳಿಂದ ಈ ವಿಷಯಗಳನ್ನು ಮುಚ್ಚಿಡುವುದು, ಕಣ್ಣು ತಪ್ಪಿಸುವುದು ಉತ್ತಮ ಎಂದು ಅವರು ಭಾವಿಸುತ್ತಾರೆ.