Advertisement

ಅನಗತ್ಯ ಓಡಾಡಿದರೆ ಪೆಟ್ರೋಲ್‌ ಸಿಗಲ್ಲ

11:18 AM May 11, 2021 | Team Udayavani |

ಶಿರಸಿ: ಅನಗತ್ಯವಾಗಿ ಓಡಾಟ ಮಾಡುವವರ ವಾಹನಕ್ಕೆ ಇಂಧನ ನೀಡದಿರುವುದಕ್ಕೂ ಶಿರಸಿ ಪೊಲೀಸ್‌ ಇಲಾಖೆ ಮುಂದಾಗಲಿದೆ. ಈ ವಿಷಯ ದೃಢಪಡಿಸಿದ ಪೊಲೀಸ್‌ ಉಪಾಧೀಕ್ಷಕ ರವಿ ನಾಯ್ಕ ಈ ಬಗ್ಗೆ ಎಲ್ಲ ಪೆಟ್ರೋಲ್‌ ಬಂಕ್‌ ಮಾಲೀಕರಿಗೂ ತಿಳಿಸಿದ್ದೇವೆ. ಮತ್ತೆ ವಾಹನ ಓಡಾಟ ಆರಂಭಗೊಂಡರೆ ಸಾರ್ವಜನಿಕರಿಗೆ ಬಂಕ್‌ಗಳಲ್ಲಿ ಪೆಟ್ರೋಲ್‌ ನೀಡುವಿಕೆಯನ್ನು ನಿಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Advertisement

ಕಠಿಣ ನಿರ್ಬಂಧ ಮೊದಲ ದಿನವಾದ ಸೋಮವಾರ ನಗರದಲ್ಲಿ ಕೈಗೊಳ್ಳಲಾದ ಬಿಗು ಕ್ರಮ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರ್ವಜನಿಕರು ಬೆಳಗಿನ ವೇಳೆಯಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ ಅಗತ್ಯ ವಸ್ತು ಖರೀದಿಸಬೇಕಿದೆ. ಹೀಗಾಗಿ ಅವರಿಗೆ ಪೆಟ್ರೋಲ್‌ ಅಗತ್ಯತೆ ಇಲ್ಲ. ಇಷ್ಟಾದರೂ ಸಹ ಕೆಲವರು ಬೈಕ್‌, ಕಾರ್‌ಗಳನ್ನು ಬಳಸಿ ಅನಗತ್ಯ ಸಂಚಾರ ನಡೆಸಿದ್ದಾರೆ.

ಸೋಮವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಶಿರಸಿಯಲ್ಲಿ 25, ಮುಂಡಗೋಡಿನಲ್ಲಿ 25, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ 5 ವಾಹನ ಜಪು¤ಗೊಳಿಸಿಕೊಳ್ಳಲಾಗಿದೆ. ಸಾರ್ವಜನಿಕರು ಅನಗತ್ಯ ಸಂಚಾರ ಮಾಡದೇ ಸಹಕರಿಸಬೇಕು. ಒಮ್ಮೆ ಬೆ„ಕ್‌ ಅಥವಾ ಕಾರ್‌ ಜಪು¤ ಮಾಡಿಕೊಂಡರೆ 30 ದಿನಗಳ ಕಾಲ ವಾಹನ ಸಿಗುವುದಿಲ್ಲ ಎಂದೂ ಹೇಳಿದರು. ನಗರದ ಒಳಗಡೆ ಪೊಲೀಸರ ಕಣ್ಣು ತಪ್ಪಿಸಿ ವಾಹನ ಸಂಚಾರ ನಡೆಸಲು ಸಾಧ್ಯವಾಗದಂತೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆ ಆಗಲಾರದು. ಆದರೆ, ಅನಗತ್ಯವಾಗಿ ತಿರುಗುವಿಕೆಗೆ ಕಡಿವಾಣ ಬೀಳಲಿದೆ. ಸರ್ಕಾರಿ ಅಧಿಕಾರಿಗಳು, ಬ್ಯಾಂಕ್‌ ಅಧಿಕಾರಿಗಳು ಹಾಗೂ ತುರ್ತು ಸೇವೆ ಒದಗಿಸುವವರು ತಮ್ಮ ಸಂಸ್ಥೆ ನೀಡಿದ ಗುರುತಿನ ಚೀಟಿ ತೋರಿಸಿದರೆ ಬಿಡುತ್ತೇವೆ. ಆದರೆ, ಅನಗತ್ಯ ಸಂಚಾರ ನಡೆಸುವಿಕೆ ನಿಲ್ಲಿಸಲಿದ್ದೇವೆ ಎಂದರು.

ಬಾಪೂಜಿ ನಗರದಲ್ಲಿ ಅನಗತ್ಯ ಓಡಾಟವನ್ನು ಸ್ಥಳೀಯ ನಿವಾಸಿಗಳೇ ಬಂದ್‌ ಮಾಡಿದ್ದಾರೆ. ಪೊಲೀಸ್‌ ಇಲಾಖೆ ಕೂಡ ನಗರದ ಪ್ರಮುಖ ವೃತ್ತದಲ್ಲಿ ನಿರ್ಬಂಧ ಹೇರಿದೆ. ಕೆಲವರು ಅಗತ್ಯ ಇದ್ದಲ್ಲಿ ನಡೆದೇ ಹೋದರು. ಲಸಿಕೆ ಪಡೆಯಲು ಬಂದ ವೃದ್ಧರಿಗೆ ವಾಹನ ಇಲ್ಲದೇ ನಡೆದೇ ಹೋಗುವಂತ ಸ್ಥಿತಿ ಕೂಡ ನಿರ್ಮಾಣ ಆದವು. ಜನತೆ ಕೂಡ ರಸ್ತೆಗಿಳಿಯದೇ ಮನೆಯಲ್ಲೇ ಇದ್ದು ಸಹಕಾರ ನೀಡಿದ್ದೂ ವಿಶೇಷವೇ ಆಗಿತ್ತು. ಕೊರೋನಾ ಭಯ ಮನೆಯಲ್ಲೇ ಇರುವಂತೆ ಮಾಡಿತ್ತು. ಟಿಎಸ್‌ಎಸ್‌ನಲ್ಲಿ ಅಡಿಕೆ ವ್ಯಾಪಾರ ತಾತ್ಕಾಲಿಕ ಸ್ಥಗಿತ: ಸರ್ಕಾರ ಜಾರಿಗೊಳಿಸಿರುವ ಕಠಿಣ ನಿರ್ಬಂಧಗೆ ಪೂರಕವಾಗುವಂತೆ ಸಂಘದಲ್ಲಿ ಅಡಿಕೆ ವ್ಯಾಪಾರವನ್ನು ತಾತ್ಕಾಲಿಕವಾಗಿ ಮೇ. 11ರಿಂದ ಬರುವ ಮೇ.15 ಶನಿವಾರದವರೆಗೆ ಸ್ಥಗಿತಗೊಳಿಸಿದೆ ಎಂದು ಟಿಎಸ್‌ಎಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಷ್ಟು ದಿನ ವ್ಯಾಪಾರ ಮಾಡಲಾಗಿದೆ. ಆದರೆ ಇನ್ನೊಂದು ಸ್ವಲ್ಪ ದಿನದ ಮಟ್ಟಿಗೆ ಯಲ್ಲಾಪುರ, ಸಿದ್ದಾಪುರ ಎರಡೂ ಶಾಖೆಗಳಲ್ಲಿ ವ್ಯಾಪಾರ ಸ್ಥಗಿತಗೊಳ್ಳಲಿದ್ದು ರೈತರು ಸಹಕಾರ ನೀಡಬೇಕು ಮತ್ತು ಈ ಸಮಯದಲ್ಲಿ ವ್ಯಾಪಾರಿ ಅಂಗಳದ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿ ಇರಲಿದ್ದು ಅಡಕೆಯನ್ನು ಇಳಿಸಿಕೊಳ್ಳಲಾಗುವುದಿಲ್ಲ. ಈ ಸಮಯದಲ್ಲಿ ಹಣ ಬಟವಡೆ ಮಿತಿ 5000 ಆಗಿದ್ದು, ಹಣಕಾಸಿನ ವ್ಯವಹಾರ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಇರುತ್ತದೆ. ಸುಪರ್‌ ಮಾರ್ಕೆಟ್‌ನ ಜೀವನಾವಶ್ಯಕ ವಸ್ತುಗಳು, ಕೃಷಿ ವಿಭಾಗ, ಕಟ್ಟಡ ಸಾಮಗ್ರಿ ವಿಭಾಗ, ರೈಸ್‌ಮಿಲ್‌ ಗಳು ಬೆಳಗ್ಗೆ 6ರಿಂದ 10ರವರೆಗೆ ತೆರೆದಿರುತ್ತದೆ. 10 ಗಂಟೆ ನಂತರ ಮಧ್ಯಾಹ್ನ 12 ಗಂಟೆವರೆಗೆ ನಗರ ಪ್ರದೇಶದಲ್ಲಿ ಹೋಂ ಡೆಲಿವರಿ ಸರ್ವಿಸ್‌ ಲಭ್ಯವಿದೆ. (ಹೋಂ ಡೆಲಿವರಿ ಕುರಿತು ವಾಟ್ಸಪ್‌ ಸಂಪರ್ಕ ಸಂಖ್ಯೆ 8310948492). ಮೆಡಿಕಲ್‌ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಇನ್ನೊಂದು ಅಡಕೆ ಬೆಳೆಗಾರರ ಸಂಸ್ಥೆ ಟಿಎಂಎಸ್‌ ಕೂಡ ಅಡಿಕೆ ವಹಿವಾಟು ಸ್ಥಗಿತಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next