Advertisement

ಅಂತರ್‌ ಜಿಲ್ಲೆ ಓಡಾಟಕ್ಕೆ ಪಾಸ್‌ ಅಗತ್ಯವಿಲ್ಲ

07:13 AM May 21, 2020 | Lakshmi GovindaRaj |

ಬೆಂಗಳೂರು: ಲಾಕ್‌ ಡೌನ್‌ 4.0 ಸಂದರ್ಭದಲ್ಲಿ ಅಂತರ್‌ ಜಿಲ್ಲಾ ಓಡಾಟಕ್ಕೆ ಯಾವುದೇ ಪಾಸ್‌ ಪಡೆಯುವ ಅಗತ್ಯವಿಲ್ಲ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದ್ದಾರೆ. ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ  ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ 3 ಬಾರಿಯ ಲಾಕ್‌ ಡೌನ್‌ ಸಂದರ್ಭದಲ್ಲಿ ಯಾವೆಲ್ಲ ಷರತ್ತುಗಳು ಜಾರಿಯಲ್ಲಿದ್ದವೋ ಅವೆಲ್ಲ ಅನ್ವಯವಾಗುತ್ತದೆ. ಈ ಮೊದಲು ಅಂತರ್‌ ಜಿಲ್ಲೆ ಓಡಾಟಕ್ಕೆ ಕರ್ನಾಟಕ ಪೊಲೀಸ್‌ ಇಲಾಖೆಯಿಂದ  ಪಾಸ್‌ ಪಡೆಯುವ ಅಗತ್ಯವಿತ್ತು.

Advertisement

ಇದೀಗ ಈ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಈ ಹಿಂದಿನ ನಿಯಮದ ಪ್ರಕಾರ, ಸರ್ಕಾರಿ ನೌಕರರು ಪೊಲೀಸರಿಗೆ ತಮ್ಮ ಗುರುತಿನ ಚೀಟಿ ತೋರಿಸಿ ಸಂಚರಿಸಬೇಕು. ಆದರೆ, ಹೊಸ ಲಾಕ್‌ಡೌನ್‌  ನಿಯಮವನ್ನು ಪಾಲಿಸಬೇಕು. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ. ಸಾರ್ವಜನಿಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next