Advertisement

ನೋ ಪಾರ್ಕಿಂಗ್‌ ನಲ್ಲಿ ಬೈಕ್‌ ನಿಲ್ಲಿಸಿದಕ್ಕೆ ಗಲಾಟೆ! ಮಹಿಳೆಯಿಂದ ಪೊಲೀಸ್ ಗೆ ಕಪಾಳ ಮೋಕ್ಷ

12:27 PM Oct 20, 2020 | sudhir |

ಬಾಗಲಕೋಟೆ: ನೋ ಪಾರ್ಕಿಂಗ್‌ ನಲ್ಲಿ ಬೈಕ್‌ ನಿಲ್ಲಿಸಿದ ವಿಷಯಕ್ಕೆ ಪೊಲೀಸರೊಂದಿಗೆ ಗಲಾಟೆ ನಡೆದ ವೇಳೆ ಮಹಿಳೆಯೊಬ್ಬರು ಪೊಲೀಸನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ನವನಗರದ ಗರ್ಭಿಣಿ ತನ್ನ ಮೈದುನನ ಜತೆಗೆ ಬಸವೇಶ್ವರ ವೃತ್ತದ ಬಳಿ ಇರುವ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಬೈಕ್‌ ನಿಲ್ಲಿಸಿದ್ದರಿಂದ ಸಂಚಾರಿ ಪೊಲೀಸರು ಬೈಕ್‌ನ ಪ್ಲಗ್‌ ಕಿತ್ತುಕೊಂಡಿದ್ದರು.

Advertisement

ಬೈಕ್‌ ಪ್ಲಗ್‌ ಕೊಡಲು ಒತ್ತಾಯಿಸಿದ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ನನ್ನ ಮೇಲೆ ಪೊಲೀಸ್‌ ಹಲ್ಲೆ ಮಾಡಿದ್ದಾನೆಂದು ಆರೋಪಿಸಿದ ಮಹಿಳೆ ಪೊಲೀಸ್‌ನಿಗೆ ಕಪಾಳ ಮೋಕ್ಷ ಮಾಡಿದರು. ಘಟನೆಯಿಂದ ಬಸವೇಶ್ವರ ವೃತ್ತದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಚಾರಿ ಪೊಲೀಸ್‌ ಪಿಎಸ್‌ಐ ಹಾಗೂ ಮಹಿಳೆ ಕುಟುಂಬದವರ ಮಧ್ಯೆ ಈ ವೇಳೆ ವಾಗ್ವಾದ ನಡೆಯಿತು.

ಬಾಗಲಕೋಟೆ 65 ಮಂದಿ ಗುಣಮುಖ: 94 ಜನರಿಗೆ ಕೊರೊನಾ ಸೋಂಕು
ಬಾಗಲಕೋಟೆ: ಜಿಲ್ಲೆಯಲ್ಲಿ ಸೋಮವಾರ 65 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಹೊಸದಾಗಿ 94 ಜನರಿಗೆ ಕೊರೊನಾ
ಸೋಂಕು ದೃಢಪಟ್ಟಿವೆ. ಜಿಲ್ಲೆಯಲ್ಲಿ ಈ ವರೆಗೆ 12617 ಕೋವಿಡ್‌ ದೃಢಪಟ್ಟಿದ್ದು, ಅದರಲ್ಲಿ 11535 ಜನ ಕೋವಿಡ್‌ ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 38, ಬಾದಾಮಿ 22, ಬೀಳಗಿ 4, ಹುನಗುಂದ 8, ಮುಧೋಳ 10, ಜಮಖಂಡಿ 12 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲಾ ಕೋವಿಡ್‌ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದ 1306 ಸ್ಯಾಂಪಲ್‌ ವರದಿ ಬರಬೇಕಿದೆ. ಜಿಲ್ಲೆಯಿಂದ ಈ ವರೆಗೆ ಒಟ್ಟು 138665 ಸ್ಯಾಂಪಲ್‌
ಪರಿಕ್ಷೀಸಲಾಗಿದ್ದು, ಈ ಪೈಕಿ 124231 ನೆಗಟಿವ್‌, 12617 ಜನರಿಗೆ ಪಾಸಿಟಿವ್‌ ಬಂದಿವೆ. ಇನ್ನು 956 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿನಿಂದ ಈ ವರೆಗೆ 127 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next