Advertisement

ಹೊರಗಿನವರನ್ನು ಜಿಲ್ಲೆಗೆ ಸೇರಿಸಕೂಡದು

05:10 PM Apr 16, 2020 | mahesh |

ಹಾಸನ: ಹೊರ ಜಿಲ್ಲೆಯವರನ್ನು ಏ.20ರವರೆಗೆ ಹಾಸನ ಜಿಲ್ಲೆಗೆ ಸೇರಿಸಕೂಡದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ – 19 ನಿಯಂತ್ರಣದ ಸಂಬಂಧ ನಡೆದ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭ, ಆರೋಗ್ಯ ಸಮಸ್ಯೆ ಹೊರತುಪಡಿಸಿ ಹೊರ ಜಿಲ್ಲೆಗಳಿಂದ ಬರುವವರನ್ನು ನಿರ್ಬಂಧಿಸಬೇಕು ಎಂದರು.

Advertisement

ಬೆಂಗಳೂರು, ಮೈಸೂರು, ಮಂಗಳೂರು ಕಡೆಯಿಂದ ಹಾಸನ ಜಿಲ್ಲೆಯನ್ನು ಪ್ರವೇಶಿಸುವವರ ಮೇಲೆ ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲಿಡಬೇಕು. ಅನಿವಾರ್ಯವಿದ್ದವರು ದ್ವಿಚಕ್ರ ವಾಹನದಲ್ಲಿ ಒಬ್ಬರು ಮಾತ್ರ, ಟ್ಯಾಕ್ಸಿಯಲ್ಲಿ ಇಬ್ಬರು ಮಾತ್ರ ಸಂಚರಿಸಬೇಕು. ಮನೆಯಿಂದ ಹೊರ ಬಂದವರು ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸದವರನ್ನು ಬಂಧಿಸಿ. ಮಾಸ್ಕ್ ಇಲ್ಲದಿದ್ದರೆ ಕರವಸ್ತ್ರ, ಟವೆಲ್‌ನಿಂದಲಾದರೂ ಬಾಯಿ, ಮೂಗು ಮಚ್ಚಿಕೊಂಡು ತಿರುಗುವಂತೆ ನಿಗಾ ವಹಿಸಿ ಎಂದೂ ಪೊಲೀಸರಿಗೆ ಸಚಿವರು ಸೂಚಿಸಿದರು.

ಪಡಿತರ ವಿತರಿಸಿ: ಪ್ರತಿಯೊಬ್ಬರಿಗೂ ಪಡಿತರ 
ಪದಾರ್ಥಗಳು ಸಿಗುವಂತೆ ನೋಡಿಕೊಳ್ಳಿ. 50-60 ಕಾರ್ಡ್‌ಗಳು ಇದ್ದರೆ ನ್ಯಾಯಬೆಲೆ ಅಂಗಡಿಯವರು ಅಲ್ಲಿಗೇ ಹೋಗಿ ಪಡಿತರ ವಿತರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೂ ಪಡಿತರ ವಿತರರಣೆ ವ್ಯವಸ್ಥೆ ಮಾಡಬಹುದು ಎಂದರು.

ಕಾಮಗಾರಿಗಳ ಆರಂಭಕ್ಕೆ ನಿರ್ಧಾರ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ವಿವಿಧ ಕಾಮಗಾರಿಗಳ ಆರಂಭಕ್ಕೂ ಅವಕಾಶ ಕೊಡುತ್ತಿದ್ದು, ಯಾವ ಕಾಮಗಾರಿಗಳನ್ನು ಆರಂಭಿಸಬಹುದೆಂಬುದನ್ನು ಗುರುವಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.ಮೇ ಮೊದಲವಾರದಲ್ಲಿ ಮತ್ತೆ ಪಡಿತರ ಕಾರ್ಡುದಾರರಿಗೆ 10 ಕೇಜಿ ಅಕ್ಕಿ, 2 ಕೇಜಿ ಬೇಳೆ ವಿತರಿಸಲಾಗುವುದು.

ಗುರುವಾರದಿಂದ ಆನ್‌ ಲೈನ್‌ ಟ್ರೇಡಿಂಗ್‌ಗೂ ಅವಕಾಶ
ಕೊಡುತ್ತಿದ್ದು, ಗ್ರಾಹಕರು ತಮ್ಮ ಮನೆ ಬಾಗಿಲಿನಲ್ಲಿ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದು. ಕೃಷಿ ಚಟುವಟಿಕೆ ಮತ್ತು ಸರಕು ಸಾಗಣೆಗೆ ಅಡಚಣೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

Advertisement

ಜಿಲ್ಲೆಗೆ ಕನಿಷ್ಠ 2 ಲಕ್ಷ ಮಾಸ್ಕ್ಗಳ ಅಗತ್ಯವಿದೆ. ದಾನಿಗಳಿಂದ ಹಾಗೂ ಕೈಗಾರಿಕೆ ಗಳ ಸಿಎಸ್‌ಆರ್‌ ನಿಧಿಯಿಂದ ಪಡೆಯುವ ಪ್ರಯತ್ನ ನಡೆದಿದ್ದು, ನಿರೀಕ್ಷಿತ ಸ್ಪಂದನೆ ಸಿಗದಿದ್ದರೆ ಸರ್ಕಾರವೇ ಅನುದಾನ ನೀಡಲಿದೆ ಎಂದರು. ಕೋವಿಡ್ – 19 ನಿಯಂತ್ರಣಕ್ಕೆ ಸಹಕರಿಸಿದ ಜಿಲ್ಲೆಯ ಜನತೆಯನ್ನು ಸರ್ಕಾರದಿಂದ ಅಭಿನಂದಿಸುವುದಾಗಿ ಹೇಳಿದರು.

ಡೀಸಿ ಗಿರೀಶ್‌ ಮಾತನಾಡಿ, ಜಿಲ್ಲೆಯಲ್ಲಿ ಜ್ವರ, ಕೆಮ್ಮು ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಎಸ್ಪಿ ಶ್ರೀನಿವಾಸಗೌಡ, ಜಿಪಂ ಸಿಇಒ ಪರಮೇಶ್‌, ಶಾಸಕರಾದ ಬಾಲಕೃಷ್ಣ, ಎಂ.ಎ. ಗೋಪಾಲಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next