Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿ-ಬೇಡಿ, ಕೈ-ಕಾಲು ಹಿಡಿದು ಮಂತ್ರಿಯಾಗುಷ್ಟು ಕೆಳ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರಿಗೂ ಒತ್ತಡ ಹಾಕಿಲ್ಲ.
ಸ್ವಾಮೀಜಿಗಳ ಮೂಲಕ ಬಿಎಸ್‌ವೈಗೆ ಒತ್ತಡ ಹಾಕಿಸಿಲ್ಲ. ಯಾರ ಮನೆಗೂ ಹೋಗಿ ನನ್ನ ಮಂತ್ರಿ ಮಾಡಿ ಎಂದು ಕೇಳಲ್ಲ ಎಂದರು. ತ್ಯಾಗ ಅನಿವಾರ್ಯ :
ಕೆಲವು ಬಾರಿ ನಾವು ಔದಾರ್ಯ ತೋರಬೇಕಾಗುತ್ತದೆ. ತ್ಯಾಗ ಮಾಡಬೇಕಾಗುತ್ತದೆ. ಸಚಿವ ಸ್ಥಾನ ಕೊಡದಿದ್ದರೆ ಭಿನ್ನಮತ ಎಂದು ಚಿಲ್ಲರೆ ರಾಜಕಾರಣ ನಾವು ಮಾಡಲ್ಲ. ಅಸಮಾಧಾನ ನನಗಿಲ್ಲ. ಮಾಧ್ಯಮದವರೇ ಊಹಾಪೋಹ ಸೃಷ್ಠಿ ಮಾಡುತ್ತಿದ್ದಾರೆ ಎಂದು ಹೇಳಿದರು.
Related Articles
Advertisement
ನನಗೆ 75 ವರ್ಷ ಆಗಿಲ್ಲ :ಹಿರಿಯನ್ನೇ ಬಿಜೆಪಿ ಕಡೆಗನಿಸಿತಾ ಎಂಬ ಪ್ರಶ್ನೆಗೆ ಎಲ್.ಕೆ. ಅದ್ವಾನಿ ಅವರ ಉದಾಹರಣೆ ನೀಡಿದ ಶಾಸಕ ಯತ್ನಾಳ, ಬಿಜೆಪಿಯಲ್ಲಿ ಅದ್ವಾನಿ ಅವರ ಪರಿಸ್ಥಿತಿ ಏನಾಗಿದೆ. ಕಾಲ ಕಾಲದಲ್ಲಿ ಒಂದೊಂದು ಯುಗ ಇರುತ್ತದೆ. ಆ ಯುಗದಲ್ಲಿ ಬೇರೆ ಬೇರೆ ಬೆಳವಣಿಗೆಯಾಗುತ್ತವೆ. ನನಗೇನೂ ವಯಸ್ಸಾಗಿಲ್ಲ. 75 ವರ್ಷ ಮೇಲಾಗಿದ್ದರೆ ನನ್ನನ್ನು ನಿವೃತ್ತಿ ಮಾಡುತ್ತಿದ್ದರು. ನನಗೀಗ 54 ವಯಸ್ಸು. ರಾಜ್ಯದ ನಂಬರ್ 1 ರಾಜಕಾರಣಿ ಆಗುವ ಅವಕಾಶ ಇವೆ ಎಂದರು. ನನಗೂ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯುತ್ತವೆ. ನನ್ನ ಮೇಲೇನು ಭ್ರಷ್ಟಾಚಾರದ ಆರೋಪವಿದೆಯೇ. ಏನಾದರೂ ಹಗರಣ ಮಾಡಿದ್ದೇನಾ. ಏನೂ ಇಲ್ಲ. ಒಬ್ಬ ಹಿಂದೂ ಮುಖಂಡ ಎಂದು ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ನನಗೆ ಭವಿಷ್ಯವಿದೆ. ನನಗೆ ಯುಗಾಂತ್ಯವಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸ್ಥಾನಕ್ಕಾಗಿ ಸ್ವಾಮೀಜಿಗಳ ಮೂಲಕ ಲಾಭಿ ನಡೆಸಿಲ್ಲ. ಪಕ್ಷವೇ ಗುರುತಿಸಿ ಕೊಡಬೇಕು. ಪಕ್ಷ ಯಾವ ಕಾರಣಗಳಿಂದ ನಿರ್ಣಯ ಕೈಗೊಂಡಿದೆಯೋ. ಅದರಲ್ಲಿ ಒಳ್ಳೆಯ ಉದ್ದೇಶವಿರಬಹುದು. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆಂದು ಪ್ರಯತ್ನ ಮಾಡಿಲ್ಲ. ಕೇಂದ್ರ ಮಂತ್ರಿಯಾಗಲೂ ಪ್ರಯತ್ನಿಸಿಲ್ಲ ಎಂದರು. ಈಶ್ವರಪ್ಪ ಟೀಕೆ ಮಾಡಲ್ಲ :
ಯತ್ನಾಳರನ್ನು ಕೇಳಿ ಬಿಜೆಪಿ ರಾಜ್ಯಾಧ್ಯಕ್ಷರನ್ನ ಮಾಡೋಕಾಗುತ್ತಾ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ಈಶ್ವರಪ್ಪ ಬಗ್ಗೆ ನನಗೆಬಹಳ ಗೌರವವಿದೆ. ಅವರು ಹಿರಿಯ ಹಿರಿಯ ನಾಯಕರು. ಅವರು ಯಾವಾಗಲೂ ನನಗೆ ಪ್ರೀತಿ ಮಾಡುತ್ತಾರೆ. ತಪ್ಪಿದಾಗ ತಿದ್ದಿದ್ದಾರೆ. ಅವರು ಕರೆದು ನನಗೆ ಹೊಡೆದರೂ ನನಗೆ ಸಿಟ್ಟಿಲ್ಲ. ನಾನು ಅದ್ವಾನಿ, ಅಮೀತ್ ಶಾ, ಮೋದಿ, ಅನಂತಕುಮಾರ, ಈಶ್ವರಪ್ಪ ಬಗ್ಗೆ ಟೀಕೆ ಮಾಡಲ್ಲ ಎಂದು ಹೇಳಿದರು.