Advertisement

“ಲಾಕ್‌ಡೌನ್‌ನಿಂದ ಯಾರೂ ಹಸಿವಿನಿಂದ ಮಲಗಬಾರದು’

10:15 PM Apr 15, 2020 | Sriram |

ಉಡುಪಿ: ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರು ಸಹಿತ ಅನೇಕ ಮಂದಿ ನಗರದಲ್ಲಿ ವಾಸವಿದ್ದು, ಅವರೆಲ್ಲ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ್ಯಾರು ಒಂದು ದಿನವೂ ಉಪವಾಸದಿಂದ ಮಲಗಬಾರದು ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

Advertisement

ಉಡುಪಿ ಕರಂಬಳ್ಳಿ ಶ್ರೀ ವೆಂಕಟ್ರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನಗರದಲ್ಲಿ ಆರಂಭಿಸಲಾದ ರಾತ್ರಿ ಊಟ ವಿತರಣೆ ಕಾರ್ಯಕ್ರಮಕ್ಕೆ ಅಜ್ಜರಕಾಡು ಪುರಭವನದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ದಿನಸಿ ನೀಡುವವರು ಜಿಲ್ಲಾಡಳಿತದ ನಿರ್ದೇಶನದಂತೆ ತಹಶೀಲ್ದಾರ್‌ ಅವರ ಗಮನಕ್ಕೆ ತಂದು ವಿತರಿಸಬೇಕು, ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನೆರವಿನಲ್ಲಿ ಕೈಜೋಡಿಸುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಕರಂಬಳ್ಳಿ ಶ್ರೀ ವೆಂಕಟ್ರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಅವರು ಮಾತನಾಡಿ, ಮೇ 3ರ ತನಕ ರಾತ್ರಿ ದಾನಿಗಳ ಸಹಕಾರದಿಂದ ಊಟ ವಿತರಣೆ ನಡೆಯಲಿದೆ. ಸಂಘಟನೆಗಳು ಪಾಸೆìಲ್‌ ಊಟ ವಿತರಿಸುವಲ್ಲಿ ಕೈ ಜೋಡಿಸಲಿದ್ದಾರೆ ಎಂದರು.

ಉದ್ಯಮಿ ಪುರುಷೋತ್ತಮ ಶೆಟ್ಟಿ ದೀಪ ಬೆಳಗಿದರು. ಕರಂಬಳ್ಳಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು, ದ.ಕ. ಮೊಗವೀರ ಮಹಾಸಭಾ ಸಂಘ ಉಚ್ಚಿಲದ ಅಧ್ಯಕ್ಷ ಜಯ ಕೋಟ್ಯಾನ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯರಾದ ಅಮೃತ ಕೃಷ್ಣಮೂರ್ತಿ, ಟಿ.ಜಿ. ಹೆಗ್ಡೆ, ಸವಿತಾ, ಹರೀಶ್‌ ಶೆಟ್ಟಿ, ಮತ್ತು ಮಹೇಶ್‌ ಠಾಕೂರ್‌, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಡಿವೈಎಸ್ಪಿ ಟಿ.ಆರ್‌ ಜಯಶಂಕರ್‌, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌, ಅದಮಾರು ಮಠದ ಮ್ಯಾನೇಜರ್‌ ಗೋವಿಂದರಾಜ್‌, ಕೃಷ್ಣಮೂರ್ತಿ ಆಚಾರ್ಯ, ಸುಧೀರ್‌ ಶೆಟ್ಟಿ, ಶಾಲಿನಿ, ತನ್ಮಯಿ ದೋರ, ಯತೀಶ್‌ ಮೊದಲಾದವರು ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಊಟ ಪ್ರಾರಂಭವಾದ ಮೊದಲ ದಿನ ನಗರದ ವಿವಿಧೆಡೆ ಹಾಗೂ ಮಲ್ಪೆ, ಪಂದುಬೆಟ್ಟು ಮೊದಲಾದ ಕಡೆಗಳಲ್ಲಿ 3,500 ಮಂದಿ ಲಾಕ್‌ಡೌನ್‌ ಸಮಸ್ಯೆಗೆ ಒಳಗಾದವರಿಗೆ ಊಟ ವಿತರಿಸಲಾಯಿತು.

ನಿರಂತರ ಸೇವೆ
ಕಡಿಯಾಳಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಈಗಾಗಲೇ ದಾನಿಗಳ ಸಹಕಾರದಿಂದ ಮಧ್ಯಾಹ್ನದ ಊಟವನ್ನು ಉಡುಪಿ ನಗರದ 30 ಕಡೆಗಳಲ್ಲಿ ವಿತರಿಸಲಾಗುತ್ತಿದೆ. ಲಾಕ್‌ಡೌನ್‌ ಆರಂಭವಾದ ಮಾ.24ರಿಂದ ಆರಂಭಗೊಂಡು ಎ.15ಕ್ಕೆ 22 ದಿನಗಳನ್ನು ತಲುಪಿದೆ. ಪ್ರತಿ ದಿನ 3,000ಕ್ಕೂ ಅಧಿಕ ಊಟವನ್ನು ವಿತರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next