Advertisement

ದೇಶದ್ರೋಹಿಗಳ ಪರ ಯಾರೂ ವಕಾಲತ್ತು ವಹಿಸಬಾರದು: ಸಚಿವ ಸಿ.ಟಿ. ರವಿ

10:11 AM Feb 24, 2020 | keerthan |

ಚಿಕ್ಕಮಗಳೂರು: ದೇಶದ್ರೋಹಿಗಳಿಗೆ ಕ್ಷಮೆ ಇರಬಾರದು. ಅವರ ಪರ ಯಾರು ವಕಾಲತ್ತು ವಹಿಸಬಾರದು ಎಂದು ಸಚಿವ ಸಿಟಿ ರವಿ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಉತ್ಸವ ಕ್ರೀಡಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಮೂಲ್ಯ ಲಿಯೋನ ಹಾಗೂ ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ ಯುವತಿಯ ವಿಚಾರಕ್ಕೆ ಗುಡುಗಿದ ಸಚಿವರು ಪಾಕಿಸ್ತಾನ ಪರ ಘೋಷಣೆ ಕೂಗುವುದು ದೇಶಭಕ್ತಿನಾ ಎಂದು ಪ್ರಶ್ನಿಸಿದರು.

ಇದೆಲ್ಲಾ ತುಕಡೆ ಗ್ಯಾಂಗ್ ಗಳ ಕೆಲಸ. ತುಕಡೆ ಗ್ಯಾಂಗ್ ಯೋಜನೆಗಳ ಪ್ರಕಾರ ಮಾತನಾಡುತ್ತಿದ್ದಾರೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜಗರ ಉಂಟು ಮಾಡಿ ಪಾಕಿಸ್ತಾನ ಖುಷಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೆ ದೇಶದಲ್ಲಿ ಅನ್ನ ಹಾಕಬೇಕಾ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next