Advertisement
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅಪ್ಪಿತಪ್ಪಿಯೂ ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ಪಕ್ಷದ ಹೆಸರು ಹೇಳದ ಪ್ರೀತಮ್ ಗೌಡ, ತಮ್ಮ ಮಾತಿನುದ್ದಕ್ಕೂ ಎನ್‌ಡಿಎ ಅಭ್ಯರ್ಥಿ ಎನ್ನುತ್ತಲೇ ಇದ್ದರು. ಹಾಸನದಲ್ಲಿ ಪ್ರಚಾರಕ್ಕೆ ಹೋಗುವ ವಿಚಾರದಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರಲ್ಲದೇ ಕಾಶ್ಮೀರಕ್ಕೆ ಹೋಗು ಅಂದ್ರೆ ಹೋಗುತ್ತೇನೆ ಎಂದು ಮಾತನ್ನು ಬೇರೆಕಡೆಗೆ ಸೆಳೆದರು.
ಪ್ರಚಾರಕ್ಕೆ ಬರುವುದು ಅನುಮಾನ
ಹಾಸನ: ಲೋಕಸಭಾ ಚುನಾವಣೆಗೆ ಕೇವಲ 18 ದಿನಗಳಷ್ಟೇ ಬಾಕಿ ಇವೆ. ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಬಹುಪಾಲು ಬಿಜೆಪಿ ಮುಖಂಡರು ಸಮ್ಮತಿಸಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಬೆಂಬಲಿಗರು ಪ್ರಚಾರಕ್ಕಿಳಿದಿಲ್ಲ. ಪ್ರೀತಂ ಗೌಡ ಮನವೊಲಿಕೆಗೆ ಪ್ರಯತ್ನ ಮುಂದುವರಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರೀತಂ ಗೌಡರಿಗೆ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಲಾಗಿದೆ. ಹಾಗಾಗಿ ಅವರು ಆ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
Related Articles
Advertisement